ಮೀಸಲಾತಿ ಪ್ರತಿಯೊಂದು ಜಾತಿಯ ಹಕ್ಕು ಅದನ್ನು ಕಸಿಯುವುದು (ಕದಿಯುವುದು) ಶಿಕ್ಷಾರ್ಹ ಅಪರಾಧವಾಗಲಿ – ಹರೀಶ್ ಬಸಾಪುರ
ದಾವಣಗೆರೆ: ಸಂಧಾನದಲ್ಲಿ ಪ್ರತಿಯೊಂದು ಜಾತಿ ಧರ್ಮಕ್ಕೂ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಎಲ್ಲಾ ಜಾತಿ ಧರ್ಮದವರಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ.
ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಲಾಭ ಪಡೆಯಲು ಬೇರೆ ಜಾತಿಗಳ ಮೀಸಲಾತಿಯನ್ನು ಕಸಿಯುವ (ಕದಿಯುವ) ಪ್ರಯತ್ನಕ್ಕೆ, ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ದಿಟ್ಟ ನಿರ್ಧಾರಗಳಿಂದ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮೀಸಲಾತಿಗಳು ಅಧಿಕಾರಸ್ಥರ ಮತ್ತು ಹಣವಂತರ ಪಾಲಾಗದೆ ಇರದು.
ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಉನ್ನತ ಸ್ಥಾನ ಗಳಿಸಿದ ನಂತರ ತಮ್ಮ ಮೀಸಲಾತಿಯನ್ನು ತಮ್ಮ ಜಾತಿಯ ಇನ್ನು ಮುಂದುವರೆಯದ ಜನರಿಗೆ ಬಿಟ್ಟು ಕೊಡುವ ಪ್ರಯತ್ನ ಮಾಡಬೇಕು ಎಂಬ ಆಲೋಚನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಇತರ ಜಾತಿಯ ಮೀಸಲಾತಿಯನ್ನು ಸ್ಥಿತಿವಂತರು ಅಧಿಕಾರಸ್ಥರು ಕಸಿಯುವ (ಕದಿಯುವ) ಕೆಲಸ ಮಾಡುತ್ತಿರುವುದು ಮಾತ್ರ ನಾಚಿಕೆಗೇಡು.
ಇಂತಹ ರಾಜಕಾರಣಿಗಳಿಗೆ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಟಿಕೆಟ್ ನೀಡದಿರುವ ತೀರ್ಮಾನ ಸ್ವಾಗತಾರ್ಹ, ಅದಕ್ಕಿನ್ನ ಹೆಚ್ಚಾಗಿ ಅಂತಹ ರಾಜಕಾರಣಿಗಳಿಗೆ ಪಕ್ಷಗಳಿಂದ ದೂರವಿಡುವ ಮೂಲಕ ಮುಂದಿನ ದಿನಗಳಲ್ಲಿ ಬೇರೆ ಯಾರೂ ಇಂತಹ ರೀತಿಯ ಮೀಸಲಾತಿ ಕಸಿಯುವ (ಕದಿಯುವ) ಕೆಲಸ ಮಾಡುವ ಯೋಚನೆ ಮಾಡದ ರೀತಿ ಮಾಡಬೇಕು ಎಂಬುದೇ ಎಲ್ಲರ ಆಶಯ.
ಕೆ.ಎಲ್.ಹರೀಶ್ ಬಸಾಪುರ.