ದಾವಣಗೆರೆ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಡಿದ ಕೆಲಸದಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮಕ್ಕೆ ಬಂದಿದ್ದ ವಾಹನ ಪಲ್ಟಿಯಾಗಿರುವ ಘಟನೆ ಪಟ್ಟಣದ ಎಸ್.ಎಸ್.ಹೈಟಕ್ ಆಸ್ಪತ್ರೆ ಬಳಿ ನಡೆದಿದೆ.
ಹಾವೇರಿಯ ಅಕ್ಕಿ ಆಲೂರಿನ ಬಿಜೆಪಿ ತನ್ನ ಅಭ್ಯರ್ಥಿ ಪ್ರಚಾರಕ್ಕೆ ಅಮಿತ್ ಶಾ ಬಂದಿದ್ದು, ಭದ್ರತೆ ದೃಷ್ಟಿಯಿಂದ ಜಾಮರ್ ವಾಹನವು ಬಂದಿತ್ತು. ಇದಾದ ಬಳಿಕ ಕಾರ್ಯಕ್ರಮ ಮುಗಿಸಿ ದಾವಣಗೆರೆ ಮೂಲಕ ಬೆಂಗಳೂರಿಗೆ ಹೊರಟಿತ್ತು…ಈ ಸಂದರ್ಭದಲ್ಲಿ ವರುಣನ ಆಗಮನವಾಗಿದೆ…ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹೊರ ಹೋಗದೇ ರಸ್ತೆಯಲ್ಲಿ ನಿಂತಿದೆ..
ಅಮಿತ್ ಶಾ ಕಾರ್ಯಕ್ರಮ ಮುಗಿಸಿ ತೆರಳುವಾಗ ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಮರ್ ವಾಹನ ಅಪಘಾತ, ಆಂಧ್ರದ ಪೊಲೀಸ್ ಸಿಬ್ಬಂದಿ ಗಂಭೀರ ಗಾಯ, ಪ್ರಾಣಾಪಯದಿಂದ ಪಾರು.@PMOIndia @HMOIndia @CMofKarnataka @HMOKarnataka @DgpKarnataka @alokkumar6994 @SpDavanagere @112davanagere @APPOLICE100 pic.twitter.com/UKs9aqmK19
— H M P Kumar (@VoiceGaruda) April 28, 2023
ಹೀಗಿರುವಾಗ ವಾಹನವೊಂದು ಚಲಿಸುವ ವೇಳೆ ಹೆದ್ದಾರಿಯಲ್ಲಿದ್ದ ನೀರು ಜಾಮರ್ ವಾಹನಕ್ಕೆ ಬಡಿದಿದೆ.. ಆಗ ಮಳೆ ನೀರು ಜಾಮರ್ ವಾಹನದ ಗ್ಲಾಸ್ ಗೆ ಎರಚಿದೆ. ಪರಿಣಾಮ ಚಾಲಕನಿಗೆ ಮುಂದೆ ದಾರಿಕಂಡಿಲ್ಲ..ಬಳಿಕ ಡಿವೈಡರ್ ಗೆ ವಾಹನ ಢಿಕ್ಕಿ ಹೊಡೆದು ನಾಲ್ಕು ಪಲ್ಟಿಯಾಗಿ ನಿಂತಿದೆ. ಇದರಿಂದ ಒಂದು ಕೋಟಿ ಮೌಲ್ಯದ ವಾಹನ ಹಾಳಾಗಿದೆ.
ಅಲ್ಲದೇ ಈ ವಾಹನವನ್ನು ಚುನಾವಣೆಗಾಗಿ ಆಂಧ್ರಪ್ರದೇಶದಿಂದ ತರಿಸಲಾಗಿದೆ. ವಾಹನದಲ್ಲಿ ಇದ್ದ ಆಂಧ್ರ ಪೋಲೀಸ್ ಚಿರಂಜೀವಿ ಆಪರೇಟರ್ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ ಡ್ರೈವರ್ ನಾಗೇಂದ್ರ ವರ್ಮಾಗೂ ಗಾಯಗಳಾಗಿವೆ. ಕರ್ನಾಟಕದ ಪೊಲೀಸ್ ಸಿಬ್ಬಂದಿ ಸತ್ಯನಾರಾಯಣಗೆ ಚಿಕ್ಕಪುಟ್ಟ ಗಾಯಗಳಾಗಿದೆ.
ಈ ವಾಹನ ಆಂಧ್ರ ಮೂಲದ್ದಾಗಿದೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿ ನಿಂದ ಗೃಹ ಮಂತ್ರಿ ಅಮಿತ್ ಶಾ ಕಾರ್ಯಕ್ರಮ ಮುಗಿಸಿ ಬೆಂಗಳೂರು ಕಡೆಗೆ ತೆರಳುವ ವೇಳೆ ಘಟನೆ ನಡೆದಿದೆ. ಗಾಯಳುಗಳು ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ ಪಿ ಬಸರಗಿ ಹಾಗೂ ಸಂತೋಷ ಕುಮಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ
