ರಾಜ್ಯ ಸರ್ಕಾರದಿಂದ ಮನೆ ಕಟ್ಟೋರಿಗೆ ಸಿಹಿಸುದ್ದಿ : ಒಂದೇ ದಿನದಲ್ಲಿ `ಭೂಪರಿವರ್ತನೆಗೆ’ ಅನುಮತಿ
ಚಿಕ್ಕಬಳ್ಳಾಪುರ : ಒಂದೇ ದಿನದಲ್ಲಿ ಮನೆ ಕಟ್ಟಿಕೊಳ್ಳಲು ಭೂ ಪರಿವರ್ತನೆಗೆ ಅನುಮತಿ ಸಿಗುವ ವ್ಯವಸ್ಥೆ ಜಾರಿಗೆ ತರುವ ಮೂಲಕ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಗೀರ್ಲಹಳ್ಳಿಯಲ್ಲಿ ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಆಗಬೇಕಾದ ಸುಧಾರಣೆಗೆ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ಮಾಡಲಾಗಿದ್ದು, ಮನೆ ಕಟ್ಟಿಕೊಳ್ಳಲು ಭೂ ಪರಿವರ್ತನೆಗೆ ಆರೇಳು ತಿಂಗಳ ಬದಲು, ಒಂದೇ ದಿನದಲ್ಲಿ ಅನುಮತಿ ಸಿಗುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.