ಹೊನ್ನಾಳಿ: ಶಾಸಕ ಎಂ.ಪಿ. ರೇಣುಕಾಚಾರ್ಯನ ಕುರಿತ ಸಿಡಿಗಳು ನನ್ನ ಹತ್ರನೂ ಬಹಳಷ್ಟಿವೆ. ಆದರೆ ಅವುಗಳನ್ನು ಈಗ ಬಿಡುಗಡೆ ಮಾಡಿದ್ರೆ ಜೈಲಿಗೆ ಹೋಗ್ತೀವಿ. ಅದಕ್ಕೆ ಈಗ ಬಿಡುಗಡೆ ಮಾಡುವುದಿಲ್ಲ ಎಂದು ಹೊನ್ನಾಳಿಯ ಮಾಜಿ ಶಾಸಕ ಹಾಗೂ ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿ ಡಿ ಜಿ ಶಾಂತನಗೌಡ ಹೇಳಿದ್ದಾರೆ.
ರೇಣುಕಾಚಾರ್ಯ ಎಲ್ಲಿಗೆ ಹೋಗ್ತಾನೆ, ಏನೇನು ಮಾಡ್ತಾನೆ ಎನ್ನುವುದು ಎಲ್ಲವೂ ಗೊತ್ತಿದೆ ಎಂದ ಶಾಂತನಗೌಡ, ಈ ಪುಣ್ಯಾತ್ಮ ಸಿಡಿ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದಾನೆ. ಸ್ಟೇ ತೆರವುಗೊಂಡ ನಂತರ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಹೊನ್ನಾಳಿಯ ಕಾರ್ಯಕರ್ತರ ಸಭೆಯಲ್ಲಿ ಈ ರೀತಿಯ ಹೊಸ ಬಾಂಬ್ ಸ್ಫೋಟಿಸಿದ ಶಾಂತನಗೌಡ,
ಈತ ಸತ್ಯ ಹರಿಶ್ಚಂದ್ರನಾಗಿದ್ದರೆ ಯಾಕೆ ಸ್ಟೇ ತರಬೇಕಿತ್ತು ಎಂದು ಪ್ರಶ್ನಿಸಿದರು.
ಆ ಸಿಡಿಗಳನ್ನ ಬಿಡುಗಡೆ ಮಾಡೋಕೆ ತುಂಬ ಜನ ಕಾಯುತ್ತಿದ್ದಾರೆ. ಈ ಪುಣ್ಯಾತ್ಮ ಎಲ್ಲೆಲ್ಲಿ ಏನೇನು ಮಾಡ್ತಾನೆ ಎಂಬುದು ನಮಗೂ ಗೊತ್ತು. ಈತ ತುಮಕೂರಿನ ವಿದ್ಯಾನಗರಕ್ಕೆ ಹೋಗುತ್ತಾನೆ. ಈ ಬಗ್ಗೆ ನಮ್ಮಲ್ಲಿ ಎಲ್ಲ ದಾಖಲೆಗಳಿವೆ. ಸ್ಟೇ ಅವಧಿ ಮುಗಿದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
