ಕರ್ನಾಟಕದಲ್ಲಿ ಎಬಿಸಿ ಮಾದರಿಯಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡಲು ಚಿಂತನೆ : ಸಿ.ಎಂ. ಬಸವರಾಜ್ ಬೊಮ್ಮಾಯಿ

ದಾವಣಗೆರೆ : ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ಅವರ ಸಾವು ದುರದೃಷ್ಟಕರವಾದದ್ದು, ನವೀನ್‌ಗೆ ಇಂತಹ ಸಾವು ಬರಬಾರದ್ದಾಗಿತ್ತು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾದರು. ನಗರದ ಜಿಎಂಐಟಿ ಕಾಲೇಜಿನ ಎಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದ್ದ ಕಾರಣದಿಂದ ನವೀನ್ ಮೃತದೇಹ ತರಲು ತಡವಾಯಿತು. ಉಕ್ರೇನ್‌ನಲ್ಲಿ ಹಿನ್ನಲೆ ತಡವಾಗಿದೆ. ಉಕ್ರೇನ್‌ನಲ್ಲಿ ನವೀನ್ ಮೃತದೇಹವನ್ನು ಎಬಾಂಬಿಂಗ್ ಮಾಡಿ ಇಡಲಾಗಿತ್ತು. ನವೀನ್ ಕುರಿತ ಮಾಹಿತಿ ಪಡೆಯಲು ನಾನು ಕೂಡ ವಿದೇಶಾಂಗ ಇಲಾಖೆ ಜೊತೆ ನಿರಂತರ ಸಂಪರ್ಕ ಮಾಡುತ್ತಿದೆ. ಅವರ ಮೇಲೆ ತೀವ್ರತರವಾದ ಒತ್ತಡವನ್ನು ಹಾಕಿ ಮೃತದೇಹವನ್ನು ತವರಿಗೆ ತಂದಿದ್ದೇವೆ. ಇಲ್ಲಿ ಹರಿಹರ ಆಸ್ಪತ್ರೆಯಲ್ಲಿ ಎಬಾಂಬಿಂಗ್ ಮಾಡಿ ಸ್ವಗ್ರಾಮಕ್ಕೆ ಕಳಿಸಲಾಗಿದೆ. ಭಗೀರಥ ಪ್ರಯತ್ನದ ಮೂಲಕ ದುಬೈ ಮೂಲಕ ಬಾಡಿಯನ್ನ ಭಾರತಕ್ಕೆ ತರಲಾಗಿದೆ ಎಂದು ಹೇಳಿದರು.

ಭಾರತದಲ್ಲಿ ವೈದ್ಯಕೀಯ ಕೋರ್ಸ್ ಶುಲ್ಕ ಹೆಚ್ಚು :
ಉಕ್ರೇನ್‌ನಲ್ಲಿನ ವೈದ್ಯಕೀಯ ಕೋರ್ಸ್ಗೂ ಮತ್ತು ಭಾರತದಲ್ಲಿನ ಕೋರ್ಸ್ಗೂ ವ್ಯತ್ಯಾಸವಿದೆ. ಭಾರತದಲ್ಲಿ ಮೆಡಿಕಲ್ ಕಾಲೇಜ್ ಶುಲ್ಕ ಜಾಸ್ತಿ ಇದೆ. ಶುಲ್ಕ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಎಬಿಸಿ ಮಾದರಿಯಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡಲು ಚಿಂತನೆ ನಡೆಸುತ್ತಿದ್ದೇವೆ, ಈ ಬಗ್ಗೆ ಎಂಸಿಎ (ಭಾರತೀಯ ವೈದ್ಯಕೀಯ ಮಂಡಳಿ) ಕೂಡ ಚರ್ಚೆ ನಡೆಸುತ್ತಿದೆ ಎಂದು ಹೇಳಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!