ರೈಲು ಪ್ರಯಾಣಿಕರೇ ಗಮನಿಸಿ ಹಲವು ರೈಲುಗಳು ರದ್ದಾಗಿವೆ

ದಾವಣಗೆರೆ: ಜನವರಿ 3 ರಿಂದ ಜನವರಿ 13 ರವರೆಗೆ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಕೆಲವು ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಇನ್ನೂ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಸಂಪೂರ್ಣವಾಗಿ ರದ್ದುಗೊಂಡ ರೈಲುಗಳ ವಿವರ ಹೀಗಿದೆ ನೋಡಿ: ರೈಲು ಸಂಖ್ಯೆ 17347 ಹುಬ್ಬಳ್ಳಿ ಚಿತ್ರದುರ್ಗ ಎಕ್ಸ್ಪ್ರೆಸ್ ಮತ್ತು 17348 ಚಿತ್ರದುರ್ಗ ಹುಬ್ಬಳ್ಳಿ ಎಕ್ಸ್ಪ್ರೆಸ್ 2ನೇ ಜನವರಿ 2023 ರಿಂದ 5ನೇ ಜನವರಿವರೆಗೆ ಮತ್ತು 9ನೇ ಜನವರಿಯಿಂದ 11ನೇ ಜನವರಿ 2023 ಸಂಪೂರ್ಣವಾಗಿ ರದ್ದಾಗಲಿದೆ.
ಹುಬ್ಬಳ್ಳಿ ಅರಸೀಕೆರೆ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16214) 1ನೇ ಜನವರಿಯಿಂದ 4ನೇ ಜನವರಿ 2023 (4 ದಿನಗಳು) ಮತ್ತು 8ನೇ ಜನವರಿಯಿಂದ 10ನೇ ಜನವರಿ 2023 (3 ದಿನಗಳು) ಸಂಪೂರ್ಣವಾಗಿ ರದ್ದಾಗಲಿದೆ.
ಅರಸೀಕೆರೆ ಹುಬ್ಬಳ್ಳಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16213) 2ನೇ ಜನವರಿಯಿಂದ 5ನೇ ಜನವರಿ 2023 (4 ದಿನಗಳು) ಮತ್ತು 9ನೇ ಜನವರಿಯಿಂದ 11ನೇ ಜನವರಿ 2023 (3 ದಿನಗಳು) ಸಂಪೂರ್ಣವಾಗಿ ರದ್ದಾಗಲಿದೆ.
ವಿಜಯಪುರ ಮಂಗಳೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 07377) 2023 ರ ಜನವರಿ 9 ಮತ್ತು 10 ರಂದು (2 ದಿನಗಳು) ಮತ್ತು ಮಂಗಳೂರು ವಿಜಯಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 07378) 2023 ರ ಜನವರಿ 10 ಮತ್ತು 11 ರಂದು (2 ದಿನಗಳು) ಸಂಪೂರ್ಣವಾಗಿ ರದ್ದಾಗಲಿದೆ.
ಹುಬ್ಬಳ್ಳಿ ವಿಜಯಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 06919) 2023 ರ ಜನವರಿ 9 ಮತ್ತು 10 ರಂದು (2 ದಿನಗಳು) ಮತ್ತು ವಿಜಯಪುರ ಹುಬ್ಬಳ್ಳಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 06920) 11 ಮತ್ತು 13 ಜನವರಿ 2023 ರಿಂದ (3 ದಿನಗಳು) ಸಂಪೂರ್ಣವಾಗಿ ರದ್ದಾಗಲಿದೆ.
ರೈಲು ಸಂಖ್ಯೆ 12079 ಬೆಂಗಳೂರು ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಹರಿಹರ ಮತ್ತು ಹುಬ್ಬಳ್ಳಿ ನಡುವೆ 2ನೇ ಜನವರಿಯಿಂದ 4ನೇ ಜನವರಿ 2023 ವರೆಗೆ (3 ದಿನಗಳು) ಮತ್ತು 10 ಮತ್ತು 11ನೇ ಜನವರಿ 2023 ರಂದು (2 ದಿನಗಳು) ಭಾಗಶಃ ರದ್ದಾಗಲಿದೆ.