ವಾಹನ ಸವಾರರ ಸ್ವಾಗತಿಸುವ ಕಸದ ರಾಶಿ, ತ್ಯಾಜ್ಯ ವಸ್ತುಗಳು
ದಾವಣಗೆರೆ : ದಾವಣಗೆರೆ ನಗರದಿಂದ ಹದಡಿ ರಸ್ತೆ ಮೂಲಕ ಹೋಗುವ ಚನ್ನಗಿರಿಗೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿ ಕಸದ ರಾಶಿ, ಮನೆ ಕೆಡವಿದಾಗ ಉಳಿಯುವ ಘನ ತ್ಯಾಜ್ಯ ವಸ್ತುಗಳು ಸೇರಿದಂತೆ ವಿವಿಧ ಬಗೆಯ ಕೊಳಕು ವಸ್ತುಗಳನ್ನು ಸುರಿಯಲಾಗಿದ್ದು, ಚನ್ನಗಿರಿಯಿಂದ ಬರುವ ಮತ್ತು ದಾವಣಗೆರೆ ಕಡೆಯಿಂದ ಚನ್ನಗಿರಿಗೆ ಹೋಗುವ ಪ್ರಯಾಣಿಕರಿಗೆ ತ್ಯಾಜ್ಯ ವಸ್ತುಗಳು ಸ್ವಾಗತಿಸುವಂತೆ ಕಾಣುತ್ತಿವೆ.
ನಗರದ ಜನ ತಮ್ಮ ಮನೆ ಕಡೆವಿ ಉಳಿದ ಮಣ್ಣು, ಕಸ, ಕಡ್ಡಿ, ತೆಂಗಿನ ಚಿಪ್ಪು ಇತ್ಯಾದಿಗಳನ್ನು ರಸ್ತೆ ಪಕ್ಕದಲ್ಲಿ ಸುರಿದಿದ್ದು ಮಹಾನಗರದ ಪಾಲಿಕೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಇನ್ನೆನು ಇನ್ನು ಕೆಲವೇ ತಿಂಗಳುಗಳಲ್ಲಿ ಶಿರಮನಹಳ್ಳಿ ಗ್ರಾಮಕ್ಕೆ ಈ ಘನತ್ಯಾಜ್ಯ ವಸ್ತುಗಳ ಸಾಲು ತಲುಪಲಿದೆ. ಪುಡಿ ಮಣ್ಣು ಇರುವುದರಿಂದ ಗಾಳಿ ಬೀಸಿ ಬರುವ ವಾಹನ ಸವಾರರಿಗೆ ಕಣ್ಣಿಗೆ ಮಣ್ಣು ರಾಚುತ್ತಿವೆ. ಅಷ್ಟೇಅಲ್ಲದೆ ಕಸದ ಅಡ್ಡೆಯಾಗಿ ಈ ರಸ್ತೆ ಪರಿವರ್ತನೆಯಾಗುತ್ತಿದ್ದು, ಸತ್ತ ಪ್ರಾಣಿಗಳ ದೇಹದ ದುರ್ಗಂಧ ಬೀರುತ್ತಿದೆ. ಹಾಗಾಗಿ ಈ ರಸ್ತೆಯನ್ನು ಕಸದ ಅಡ್ಡೆಯಾಗಿ ಪರಿವರ್ತನೆಯಾಗುತ್ತಿರುವುದನ್ನು ತಡೆಗಟ್ಟಿ, ಘನ ತ್ಯಾಜ್ಯ ವಸ್ತುಗಳನ್ನು ಸುರಿಯುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಮಹಾನಗರ ಪಾಲಿಕೆ ಮಹಾಪೌರರು ಮತ್ತು ಸದಸ್ಯರು.