ಶಾಲೆಯ ಬಸ್ ನಿಲ್ಲಿಸಲು ಮರದ ಕೊಂಬೆಗಳು ಅಡ್ಡಿ.! ಮರಕಡಿತಲೆ ಮಾಡಿದ ಜೆಸಿಬಿಗೆ ದಂಡ

ಮರಕಡಿತಲೆ ಮಾಡಿದ ಜೆಸಿಬಿಗೆ ದಂಡ
ದಾವಣಗೆರೆ : ನಗರದ ನಿಜಲಿಂಗಪ್ಪ ಬಡಾವಣೆಯ ಅಮೃತಾನಂದಮಯಿ ಶಾಲೆ ಬಳಿ ಅನುಮತಿ ಪಡೆಯದೆ ಮರ ಕಡಿಯುತ್ತಿದ್ದವರಿಗೆ ದಂಡ ವಿಧಿಸಲಾಗಿದೆ.
ಸಾರ್ವಜನಿಕರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬಡಾವಣೆ ಪೊಲೀಸ್ ಠಾಣೆಯ 112 ವಾಹನ ಸಿಬ್ಬಂದಿ ಸ್ಥಳಕ್ಕೆಆಗಮಿಸಿ, ಪರವಾನಗಿ ಇಲ್ಲದೆ ಮರಕಡಿತಲೆಯಲ್ಲಿ ನಿರತರಾಗಿದ್ದ ಜೆ.ಸಿ.ಬಿ.ಯವರಿಗೆ ದಂಡ ವಿಧಿಸಿದ್ದಾರೆ.
ಶ್ರೀಮಾತಾ ಅಮೃತಾನಂದಯಿ ಶಾಲೆಯ ಬಸ್ ನಿಲ್ಲಿಸಲು, ಕೆಇಬಿ ಲೈನ್ ಗೆ ಮರದ ಕೊಂಬೆಗಳು ಅಡ್ಡ ಬಂದಿವೆ ಎಂಬ ಸಬೂಬು ಹೇಳಿ ಮರ ಕಡಿಯಲು ಶಾಲೆಯವರು ಮುಂದಾಗಿದ್ದರು ಎನ್ನಲಾಗಿದೆ.