ಶವ ಸಂಸ್ಕಾರದ ಮೇರವಣಿಗೆ ಮೇಲೆ ಹರಿದ ಟ್ರಕ್: 19 ಸಾವು

ಬೀಜಿಂಗ್: ಚೀನಾದಲ್ಲಿ ರಸ್ತೆ ನಿಯಮವನ್ನು ಸರಿಯಾಗಿ ಪಾಲಿಸದ ಕಾರಣಕ್ಕೆ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ, ಕಳೆದ ಸೆಪ್ಟೆಂಬರ್‌ನಲ್ಲಿ ನೈರುತ್ಯ ಭಾಗದ ಗುಯ್‌ಝೌ ಪ್ರಾಂತ್ಯದಲ್ಲಿ ಕ್ವಾರಂಟೈನ್‌ಗೆ ಜನರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಉರುಳಿಬಿದ್ದು 27 ಮಂದಿ ಮೃತಪಟ್ಟಿದ್ದರು.
ಇದೀಗ ಇಲ್ಲಿನ ಜಿನ್‌ಕ್ಸಿ ಪ್ರಾಂತ್ಯದ ನಾಂಚಾಂಗ್ ಕೌಂಟಿಯಲ್ಲಿ ಭಾನುವಾರ ಶವಸಂಸ್ಕಾರ ಮೆರವಣಿಗೆ ಮೇಲೆ ಟ್ರಕ್ ಹರಿದ ದುರಂತದಲ್ಲಿ 19 ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಮಂಜಿನ ವಾತಾವರಣದಲ್ಲಿ ಟ್ರಕ್ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸದೆ ಇದ್ದುದೇ ಅಪಘಾತಕ್ಕೆ ಕಾರಣ ಎಂದು ನಾಂಚಾಂಗ್ ಕೌಂಟಿಯ ಸಂಚಾರ ಪೊಲೀಸರು ತಿಳಿಸಿದ್ದಾರೆ.