ಹನೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಹಳ್ಳಿಯ 10 ಕಾರ್ಯಕರ್ತರಿಗೆ ಟಿವಿಯನ್ನು ಉಡುಗೊರೆಯಾಗಿ ಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಘೋಷಿಸಿರುವ ಯೋಜನೆಗಳ ವಿವರಗಳನ್ನು ಹೊಂದಿರುವ ಕಾರ್ಡ್ ಅನ್ನು ಪ್ರತಿ ಮನೆ ಮನೆಗೂ ನೀಡಬೇಕು. ಮನೆಯವರಿಂದ ಸಹಿ ಹಾಕಿಸಬೇಕು. ಹೆಚ್ಚು ಮಂದಿಯನ್ನು ನೋಂದಣಿ ಮಾಡಿದ 10 ಕಾರ್ಯಕರ್ತರ ಮನೆಗೆ ಟಿವಿ ಉಡುಗೊರೆ ಕೊಡುತ್ತೇವೆ ಎಂದವರು ಹೇಳಿದ್ದಾರೆ.
ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮಹಿಳಾ ಯಜಮಾನಿಗೆ ತಿಂಗಳಿಗೆ 2 ಸಾವಿರ ನೀಡುವ ಗ್ಯಾರೆಂಟಿ ಕಾರ್ಡ್ ಅನ್ನು ಹೆಚ್ಚು ಮನೆಗಳಿಗೆ ತಲುಪಿಸುವಂತೆ ಹೇಳಿರುವ ಅವರು, ನೀವು ಭೇಟಿ ನೀಡಿರುವ ಮನೆಯವರು ಯಾವುದೇ ಪಕ್ಷದ ಬೆಂಗಲಿಗರಾಗಿರಲಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಅವರಿಗೆ ತಿಳಿಸಬೇಕು ಎಂದಿದ್ದಾರೆ.
