ಬರದನಾಡಿನ ಬಡ ಪ್ರತಿಭೆ ಸೌಮ್ಯಗೆ ಎರಡು ಬಂಗಾರದ ಪದಕ : ಜಗಳೂರು ತಾಲೂಕಿನ ಕೀರ್ತಿಗೆ ಪಾತ್ರ
ಜಗಳೂರು: ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಸೌಮ್ಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂ ಎಸ್ ಸಿ ರಸಾಯನಶಾಸ್ತ್ರ MSc Chemistry ಸ್ನಾತಕೋತ್ತರ ವಿಭಾಗದಲ್ಲಿ Rank ಪಡೆದು ಎರಡು ಚಿನ್ನದ Gold Medal ಪದಕ ಮುಡಿಗೇರಿಸಿಕೊಂಡು ತಾಲೂಕಿನ ಕೀರ್ತಿ ಪತಾಕಿ ಹಾರಿಸಿದ್ದಾರೆ.
ಅಣಬೂರು ಗ್ರಾಮದ ನಾಗರಾಜ್ ಮತ್ತು ರೇಣುಕಮ್ಮ ಅವರು ಮುಗ್ಗಿದ ರಾಗಿಹಳ್ಳಿ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ Morarji Residential School ಅಡುಗೆ ಸಹಾಯಕರಾಗಿ ಬದುಕಿನ ಬಂಡಿ ಸಾಗಿಸುತ್ತಿರುವ ಬಡದಂಪತಿಗಳಿಗೆ ಪುತ್ರಿಯಾಗಿ ಜನಿಸಿ ತಮ್ಮ 1-5 ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಅಣಬೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿ ಭವಿಷ್ಯದ ಕನಸ್ಸನ್ನು ಹೊತ್ತು ಮೊರಾರ್ಜಿ ದೇಸಾಯಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ 6ರಿಂದ 10 ನೇ ತರಗತಿವರೆಗೆ ಮೊರಾರ್ಜಿದೇಸಾಯಿ ವಸತಿಶಾಲೆಯಲ್ಲಿ ಪೂರೈಸಿದರು.
ನಂತರ ಪದವಿಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗ ಆಯ್ಕೆಮಾಡಿಕೊಂಡು ಛಲದಿಂದ ಪರಿಶ್ರಮದೊಂದಿಗೆ ತೇರ್ಗಡೆಯಾಗಿ ಪದವಿ ಶಿಕ್ಷಣವನ್ನು ದಾವಣಗೆರೆ ಮಹಿಳಾ ಕಾಲೇಜಿನಲ್ಲಿ ಪಡೆಯುತ್ತಾರೆ.ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆಯುವ ಕನಸ್ಸನ್ನು ಹೊರದೆ ತಮ್ಮ ಛಲವನ್ನು ಬಿಡದೆ ಎಂಎಸ್ ಸಿ ರಸಾಯನ ಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಯನ್ನು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಎರಡು ಚಿನ್ನದ ಪದಕಗಳನ್ನು ಹಾಗೂ ಪ್ರಶಸ್ತಿ ಬಹುಮಾನಗಳಿಗೆ ಭಾಜನರಾಗಿ ಪೋಷಕರಿಗೆ ವಿದ್ಯೆ ಕಲಿಸಿದ ಗುರುಗಳಿಗೆ ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ತಂದಿದ್ದಾರೆ.ಉನ್ನತ ಹುದ್ದೆಯ ನಿರೀಕ್ಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದಾರೆ. ಇದಕ್ಕೆ ತಾಲೂಕಿನ ಹಿತೈಷಿಗಳು ಪೋಷಕರು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.ಒಟ್ಟಾರೆಯಾಗಿ ಬರದನಾಡಿನ ಬಡಕುಟುಂಬದ ಪ್ರತಿಭೆ ಅರಳಿರುವುದು ಶ್ಲಾಘನೀಯವೇ ಸರಿ. ಭವಿಷ್ಯ ಉಜ್ವಲವಾಗಲಿ ಎಂಬುದು ಪತ್ರಿಕೆಯ ಆಶಯ.