Assault: ಎರಡು ಗುಂಪುಗಳ ನಡುವೆ ಗಲಾಟೆ: ಬಿಡಿಸಲು ಹೋದ 112 ವಾಹನದ ಪೊಲೀಸ್ ಪೇದೆಗೆ ಕಲ್ಲೇಟು.!
ದಾವಣಗೆರೆ: ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಮಾರಾಮಾರಿ ಗಲಾಟೆಯನ್ನು ಬಿಡಿಸಲು ಹೋದ ಕಾನ್ಸ್ಟೇಬಲ್ ತಲೆಗೆ ಕಲ್ಲಿನಿಂದ ಹೊಡೆದಿರುವ ಘಟನೆ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇತೊಗಲೇರಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಹನುಮಂತರಾವ್ ಗಾಯಗೊಂಡಿರುವ ಪೇದೆಯಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಹಿರೇತೊಗಲೇರಿ ಗ್ರಾಮದಲ್ಲಿ ಹಬ್ಬ ಆಚರಣೆ ವೇಳೆ ಮದ್ಯೆ ಸೇವಿಸಿದ ಮತ್ತಲ್ಲಿ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಅದನ್ನು ತಹಬದಿಗೆ ತರಲು ಯತ್ನಿಸಿದರು ಸಾಧ್ಯವಾಗಿಲ್ಲ. ಈ ವೇಳೆ ಪೇದೆ ಹನುಮಂತರಾವ್ ಒಬ್ಬರನನ್ನು ಜೀಪಲ್ಲಿ ಹತ್ತಿಸಿಕೊಂಡಿದ್ದಾರೆ. ಆ ವೇಳೆ ಆ ಗ್ರಾಮದ ನಿವೃತ್ತ ಎಎಸ್‌ಐ ಕಡೆಯವರು ತಮ್ಮ ಎದುರಾಳಿಗೆ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾದಾಗ ಅದು ಹನುಮಂತರಾವ್ ಅವರ ತಲೆಗೆ ತಗುಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ ಸ್ಥಳಕ್ಕೆ ಎಸ್ ಪಿ ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಹಬದಿಗೆ ತರಲಾಗಿದೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.