ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ ಮಟ್ಟದ ಎಸ್‌ಟಿಟಿಪಿ ಕಾರ್ಯಗಾರಕ್ಕೆ ಚಾಲನೆ
ದಾವಣಗೆರೆ: ಎಐಸಿಟಿಇ ಪ್ರಾಯೋಜಕತ್ವದಲ್ಲಿ ಇಲ್ಲಿನ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಇ ಅಂಡ್ ಸಿ ವಿಭಾಗದಲ್ಲಿ ಇಂದು ರಾಷ್ಟಮಟ್ಟದ ಎಸ್‌ಟಿಟಿಪಿ ಕಾರ್ಯಗಾರ ಉದ್ಘಾಟನಾ ಸಮಾರಂಭ ಜರುಗಿತು.
ಧಾರವಾಡದ ಐಐಟಿ ಡೀನ್ ಪೊ. ಡಾ. ಎಸ್.ಆರ್ ಮಹದೇವಾ ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿದರು. ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಎಸ್. ಹೋಳಿ ಅಧ್ಯಕ್ಷತೆ ವಹಿಸಿದ್ದರು. ಇನ್ಫ್ರಾಸ್ಟ್ರಕ್ಚರ್ ಮತ್ತು ಪ್ಲಾನಿಂಗ್ ವಿಭಾಗದ ಡೀನ್ ಡಾ. ಎನ್. ನಾಗೇಶ್, ಸ್ಟೂಡೆಂಟ್ ಅಫೇರ್ಸ್ ವಿಭಾಗದ ಡಾ. ಹೆಚ್. ಈರಮ್ಮ, ಇ ಅಂಡ್ ಸಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಮೂರ್ತಿ, ಕಾಲೇಜಿನ ಸದಸ್ಯರಾದ ಡಾ.ಶ್ರೀನಿವಾಸ್ ನಾಯ್ಕ್, ಡಾ. ಎನ್. ಮಂಜಾನಾಯ್ಕ್, ಡಾ.ಲಕ್ಷ್ಮಣ ನಾಯ್ಕ, ಡಾ.ರಮೇಶ್, ಶಶಿಕಲಾ, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.