ಅನಾಥಾಶ್ರಮದಲ್ಲಿ ಯುಗಾದಿ ಹಬ್ಬ, ಜನ್ಮದಿನ ಆಚರಣೆ; ಶ್ಲಾಘನೆ..

ಅನಾಥಾಶ್ರಮದಲ್ಲಿ ಯುಗಾದಿ ಹಬ್ಬ, ಜನ್ಮದಿನ ಆಚರಣೆ; ಶ್ಲಾಘನೆ..

ದಾವಣಗೆರೆ : ನಗರದ ಖಾಸಗಿ ವಾಹಿನಿ ಜಿಲ್ಲಾ ವರದಿಗಾರ ಮಧುನಾಗರಾಜ್ ಕುಂದುವಾಡ ಇವರ ಧರ್ಮಪತ್ನಿ ಮಧುರ ಇವರು ಹೊರ ವಲಯದ ಅನಾಥ ಆಶ್ರಮದಲ್ಲಿ ಯುಗಾದಿ ಹಬ್ಬದ ಜೊತೆಗೆ ಹೋಳಿಗೆ ಊಟ ಹಾಕಿಸಿ ಜನ್ಮದಿನ ಆಚರಿಸಿಕೊಂಡು ಸಾರ್ಥಕತೆ ಮೆರೆದಿದ್ದಾರೆ‌.
ದಾವಣಗೆರೆಯ ಹೊರ ವಲಯದಲ್ಲಿರುವ ತುರ್ಚಗಟ್ಟ ಬಳಿ ಇರುವ ಸಾಧನ ವೃದ್ದಾಶ್ರಮದಲ್ಲಿ ಅನಾಥರೊಂದಿಗೆ ಮಧುರ ಇವರು ಯುಗಾದಿ ಹಬ್ಬದ ಜೊತೆಗೆ ಜನ್ಮದಿನ ಆಚರಿಸಿ ಮಾದರಿಯಾಗಿದ್ದಾರೆ.

ಅನಾಥಾಶ್ರಮದಲ್ಲಿ ಯುಗಾದಿ ಹಬ್ಬ, ಜನ್ಮದಿನ ಆಚರಣೆ; ಶ್ಲಾಘನೆ..
ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಸಂಸ್ಥಾಪಕಿ ಡಾ. ಪುಷ್ಪಲತಾ ಪವಿತ್ರಾರಾಜ್, ಇಂತಹ ಆಶ್ರಮಗಳು ಉಳಿಯುವುದು ಇಂತಹ ದಾನಿಗಳಿಂದಲೇ, ಮಧುನಾಗರಾಜ್ ಅವರು ಮಾಧ್ಯಮ ಕ್ಷೇತದಲ್ಲಿ ಬಡವರಿಗೆ, ನಿರ್ಗತಿಕರಿಗೆ, ರೈತರಿಗೆ ನೆರವಾಗುತ್ತಿದ್ದಾರೆ, ಅವರ ಪತ್ನಿ ಮಧುರ ಅವರು ಸಹ ಸಮಾಜ ಸೇವೆ ಮನೋಭಾವನೆ ರೂಢಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ, ಅವರು ಬಂದು 70ರಿಂದ 80 ಮಂದಿಗೆ ಅನಾಥರ ಜೊತೆ ಯುಗಾದಿ ಹಬ್ಬ, ಜನ್ಮದ ದಿನ ಆಚರಿಸಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ, ಎಷ್ಟೆ ಹಣವಿದ್ದರು ಸಹಾಯ ಮಾಡಲು ಯಾರು ಮುಂದೆ ಬರುವುದಿಲ್ಲ, ಎಲ್ಲಾ ಅನಾಥರ ಆಶೀರ್ವಾದ ಮಧುನಾಗರಾಜ್ ಅವರ ದಂಪತಿಗಳ ಮೇಲೆ ಇರಲಿದೆ, ದಂಪತಿಗಳ ಈ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಆಶೀಸಿದರು..

ಅನಾಥಾಶ್ರಮದಲ್ಲಿ ಯುಗಾದಿ ಹಬ್ಬ, ಜನ್ಮದಿನ ಆಚರಣೆ; ಶ್ಲಾಘನೆ..
ಈ ಸಂದರ್ಭದಲ್ಲಿ ಪತ್ರಕರ್ತ ಮಧುನಾಗರಾಜ್ ಕುಂದುವಾಡ, ಸಣ್ಣನಿಂಗಪ್ಪ, ನಿಂಗಪ್ಪ, ನೇತ್ರಮ್ಮ, ಮಾನ್ಯ ಸೇರಿದಂತೆ ಮತ್ತಿತರರಿದ್ದರು..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!