ಕೆರೆಯಂತಾದ ದಾವಣಗೆರೆ ಬನಶಂಕರಿ ಬಡಾವಣೆಯ ಅಂಡರ್ ಪಾಸ್

ದಾವಣಗೆರೆ- ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರಿಗೂ ಸೇರಿದಂತೆ ಎಲ್ಲರಲ್ಲೂ ಈ ಮಳೆ ಹರ್ಷ ತಂದಿದೆ.
ಆದರೆ ದಾವಣಗೆರೆಯಲ್ಲಿ ಕೆಲವೆಡೆ ಅವೈಜ್ಞಾನಿಕ ರಸ್ತೆ ಹಾಗೂ ಅಂಡರ್ ಪಾಸ್ ಗಳು ಕೇವಲ ಜಿಟಿ ಜಿಟಿ ಮಳೆಗೇ ಕೆರೆಗಳಾಗಿ ಮಾರ್ಪಡುತ್ತಿವೆ. ಇನ್ನು ಜೋರು ಮಳೆಯಾದರೆ ಏನಾಗಬಹುದೋ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ.
ನಗರದ ಬನಶಂಕರಿ ಬಡಾವಣೆಯ ಆಂಡರ್ ಪಾಸ್ ಜಲಾವೃತವಾಗಿದೆ. ಬಡಾವಣೆಗೆ ಹೋಗಬೇಕಾದವರು ಹರ ಸಾಹಸ ಪಡುವಂತಾಗಿದೆ. ಇದನ್ನು ನಿರ್ಮಿಸಿದ ಮಹಾಶಯರು ಈಗೊಮ್ಮೆ ಬಂದು ಹೋಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ