ಸರ್ಕಾರದ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿದ ಕೀರ್ತಿ ನಮ್ಮ ಸರ್ಕಾರದ್ದು – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದಾವಣಗೆರೆ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸರ್ಕಾರದ ಯೋಜನೆಗಳ ಲಾಭ ನೇರವಾಗಿ ಫಲಾನುಭವಿಗಳಿಗೆ ತಲುಪಿಸಿದ ಕೀರ್ತಿ ನಮ್ಮ ಸರ್ಕಾರದ್ದು, ಕಳೆದ ಐವತ್ತು ವರ್ಷಗಳಿಂದ ಏನೂ ಮಾಡದವರೂ ಚುನಾವಣೆ ಹೊತ್ತಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆಗಳನ್ನು ನೀಡುತ್ತಿದ್ದಾರೆ. ಇಂತಹ ಗ್ಯಾರಂಟಿ ಯೋಜನೆಗಳ ಬಗ್ಗೆ  ಮೋಸ ಹೋಗದಿರಿ ಎಂದು    ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು, ಗಣಿ ಖಾತೆ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ  ಅವರು ಮಾತನಾಡಿದರು

ಸರ್ಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪಬೇಕು. ಯೋಜನೆಗಳಿಂದ ಜನರು ಸಶಕ್ತೀಕರಣ ಆಗಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಹಿನ್ನಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಯೋಜನೆಗಳ ಅನುಷ್ಠಾನದಲ್ಲಿ ಬದಾಲಾವಣೆ ಮೂಲಕ  ಜನರ ಬದುಕಿನಲ್ಲಿ ಪರಿವರ್ತನೆ ತಂದಿದೆ ಈಗ  ನಿಮ್ಮ ಮುಂದೆ ನಿಂತಿದ್ದೆವೆ. ನೀವು ಆರ್ಶಿವಾದಿಸಬೇಕು ಎಂದರು.

ಪ್ರಧಾನಮಂತ್ರಿ ಮೋದಿಜಿ ಅವರು ಅಧಿಕಾರಕ್ಕೆ ಬರುವ ಮುನ್ನಾ ನಮ್ಮನ್ನಾಳಿದ ಸರ್ಕಾರ ಬಡವರಿಗಾಗಿ ರೂಪಿಸಿದ ಯೋಜನೆಗಳ ಶೇ.85 ರಷ್ಟು ಪಾಲು ಮಧ್ಯವರ್ತಿಗಳ ಜೇಬಿಗೆ ಹೋಗುತ್ತಿತ್ತು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ. ನಿರಾರ್ಧವಾಗಿದ್ದ ಆಧಾರ್‍ಗೆ ಕಾನೂನಿನ ಬಲ ತರಲಾಯಿತು. ಬ್ಯಾಂಕ್ ಖಾತೆ ಇಲ್ಲದ ಜನರಿಗೆ ಜನ್‍ಧನ್ ಯೋಜನೆ ಜಾರಿಗೊಳಿಸಿ ಬ್ಯಾಂಕ್ ಖಾತೆ ತೆರೆಯಲಾಯಿತು. ಈವರೆಗೂ 42 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದರ ಮೂಲಕ ಸರ್ಕಾರದ ಯೋಜನೆಗಳ ಅನುದಾನ ಬಡವರ ಖಾತೆಗೆ ನೇರವಾಗಿ ಜಮಾವಾಗುವಂತೆ ಮಾಡಲಾಯಿತು. ಇದರ ಪರಿಣಾಮ ಮಧ್ಯವರ್ತಿಗಳ ಪಾಲಗುತ್ತಿದ್ದ ರೂ.2 ಲಕ್ಷ 30 ಸಾವಿರ ಕೋಟಿ ಬಡವರ ಹಣವನ್ನು ಕಳೆದ 7 ವರ್ಷಗಳಲ್ಲಿ ನಮ್ಮ ಸರ್ಕಾರ ಉಳಿಸಿದೆ ಎಂದು ಹೇಳಿದರು.

ಕಳೆದ ಐವತ್ತು ವರ್ಷಗಳಿಂದಲೂ ಅಧಿಕಕಾಲ ನಮ್ಮನ್ನು ಆಳಿದವರು ಕೇವಲ ಭರವಸೆಗಳನ್ನು ನೀಡಿದ್ದಾರೆ. ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಬಹಳಷ್ಟು ಯೋಜನೆಗಳು ಅನುಷ್ಠಾನಗೊಂಡಿಲ್ಲ.  ನೀಡಿದ ಭರವಸೆಗಳು ಸ್ಕೀಂಗಳು ಬಡವರಿಗೆ ತಲುಪಿಲ್ಲ. ಈವರೆಗೂ ಘೋಷಣೆ ಮಾಡಿದ ಸ್ಕೀಂಗಳು ಅನುಷ್ಠಾನಗೊಂಡಿದ್ದಾಗಿದ್ದಾರೆ ಹೊಸದಾಗಿ ಯಾವುದೇ  ಸ್ಕೀಂ ಘೋಷಣೆ ಮಾಡುವ ಅಗತ್ಯ ಇರಲಿಲ್ಲ, ಘೋಷಣೆ ಮಾಡಿ ಕಾರ್ಯಕ್ರಮ ಅನುಷ್ಠಾನಗೊಳಿಸದವರು    ಚುನಾವಣೆ ಹೊತ್ತಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಜನರಿಗೆ ನೀಡುತ್ತಿದ್ದಾರೆ. ಇಂತಹ ಗ್ಯಾರಂಟಿ ಯೋಜನೆಗಳ ಬಗ್ಗೆ  ಮೋಸ ಹೋಗದಿರಿ ಎಂದು  ಹೇಳಿದರು.

ಮೋದಿಜಿ  ನೇತೃತ್ವದ ಸರ್ಕಾರ ದೇಶದ ಬಡವರಿಗಾಗಿ ಹಲವಾರು ಕ್ರಾಂತಿಕಾರ ಯೋಜನೆಗಳನ್ನು ಜಾರಿಗೊಳಿಸಿದೆ ನಮ್ಮ ಸರ್ಕಾರದ ಅವಧಿಯಲ್ಲಿ 9 ಕೋಟಿ ಹೊಸ ಗ್ಯಾಸ್ ಸಂಪರ್ಕವನ್ನು ಕಲ್ಪಿಸುವುದರ ಮೂಲಕ ದೇಶದಲ್ಲಿ ಹೊಗೆ ಮುಕ್ತ ಅಡುಗೆ ಮನೆ ಮಾಡಿದ ಕೀರ್ತಿ ನಮ್ಮ ಸರ್ಕಾರದ್ದು, ಉಜ್ಜಲ ಯೋಜನೆಯಡಿ ಎಲ್‍ಇಡಿ ಬಲ್ಪ್‍ಗಳನ್ನು ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ವಿತರಿಸಿದ ಪರಿಣಾಮ 19 ಸಾವಿರ ಕೋಟಿ ಬಡವರ ಮನೆಯ ವಿದ್ಯುತ್ ಬಿಲ್ ಉಳಿತಾಯವಾಗಿದೆ. 11 ಕೋಟಿ ಮನೆಗಳಿಗೆ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸಿದ್ದೆವೆ. ಕೋವಿಡ್‍ನಿಂದ ಇಡೀ ಜಗತ್ತು ತತ್ತರಿಸುತ್ತಿರುವಾಗ 200 ಕೋಟಿ ವ್ಯಾಕ್ಸಿನ್ ನೀಡಿದ್ದೆವೆ. ಮಾನವ ಶಕ್ತಿಯ ಸಬಲೀಕರಣಕ್ಕೆ  ಕೌಶಲ್ಯ ಇಂಡಿಯಾ ಯೋಜನೆ ಜಾರಿ ಗೊಳಿಸಿದ್ದೆವೆ ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಅವರು ಮಾತಾನಾಡಿ  ಈ ಇಡೀ ಜಿಲ್ಲೆ ಸಮಗ್ರ ಅಭಿವೃದ್ದಿಯಾಗಬೇಕು ಜನರು ನೆಮ್ಮದಿಯಿಂದ ಇರಬೇಕು ಎಂಬುವುದು ನಮ್ಮ   ಸಂಕಲ್ಪವಾಗಿದೆ.ಈ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ದಾಹ ಮುಕ್ತ ಕರ್ನಾಟಕವಾಗಿಸಬೇಕೆಂಬ ಸಂಕಲ್ಪದಿಂದ 9 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ ನಗರದ ಜನತೆ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ ಭದ್ರಾ ಮೇಲ್ದಂಡೆ ಯೋಜನೆಯಡಿ 5ಸಾವಿರದ 300 ಕೋಟಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಅಮೃತ ಯೋಜನೆಯಡಿ 1 ಸಾವಿರ ಕೋಟಿ ಅನುದಾನ ಒದಗಿಸಿದೆ. ಬಹುದಿನಗಳ ಜಿಲ್ಲೆಯ ಜನರ ಆಶಯದಂತೆ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಕಾರ್ಯಕತಗೊಳಿಸಲಾಗುವುದು.ಎಂದು ಹೇಳಿದರು.

ಜಿಲ್ಲೆಯ ಇತಿಹಾಸದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದು, ಇದೇ ಮೊದಲು ನಿಮ್ಮ ಮನೆ ಬಾಗಿಲಿಗೆ ಸರ್ಕಾರ ಬಂದು ಸೌಲಭ್ಯ ನೀಡುವ ಕಾರ್ಯಕ್ರಮ ಇದಾಗಿದೆ. ಇಂದು  ಜಿಲ್ಲೆಯ 64,674 ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ ಎಂದರು.

ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರು ಮಾತಾನಾಡಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಮಾಹಿತಿ ನೀಡಿ ಮುಂದಿನ 6 ತಿಂಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣಗೊಳಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಗಳೂರು ಶಾಸಕ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ,  ಮಾಯಕೊಂಡ ಶಾಸಕ ಹಾಗೂ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಪ್ರೊ.ಎನ್.ಲಿಂಗಣ್ಣ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಾದ ಬಸವರಾಜ್ ನಾಯ್ಕ,  ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ ಮಾಹಿತಿ ಕಣಜ ಹಾಗೂ  ಸಂಜೀವಿನಿ ಒಕ್ಕೂಟಗಳ ಮಳಿಗೆಗಳನ್ನು ಉದ್ಘಾಟಿಸಿದ್ದರು.

ಸೌಲಭ್ಯಗಳ ವಿತರಣೆ: ಸಮ್ಮೇಳನದಲ್ಲಿ 30 ಸಾವಿರಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಿದ್ದು ಈ ಪೈಕಿ ಆಯ್ದಾ ಫಲಾನುಭವಿಗಳಿಗೆ ವೇದಿಕೆ ಮೇಲೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಲ್ಯಾಪ್ ಟಾಪ್, ಟ್ಯಾಬ್ ಸೇರಿದಂತೆ ವಿತರಿಸಿದರು. ಸಮ್ಮೇಳನದಲ್ಲಿ ಕೃಷಿ ತೋಟಗಾರಿಕೆ, ರೇಷ್ಮೇ ಇಲಾಖೆ, ವಿಕಲಚೇತನ ಸೇರಿದಂತೆ ವಿವಿಧ ಇಲಾಖಾ ಫಲಾನುಭವಿಗಳು ಯೋಜನೆಗಳಿಂದ ತಮ್ಮ ಬದುಕಿನಲ್ಲಿ ಉಂಟಾದ ಬದಲಾವಣೆ ಕುರಿತಂತೆ ಅನಿಸಿಕೆ ಹಂಚಿಕೊಂಡರು. ಫಲಾನುಭವಿಗಳ ಜಾಗೃತಿಗಾಗಿ 60ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎ ರವೀಂದ್ರನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ,  ಸಚಿವರಾದ ಆಚಾರ್ ಹಾಲಪ್ಪ, ಪಾಲಿಕೆಯ ಮಹಾಪೌರರ ವಿನಾಯಕ್.ಬಿ.ಹೆಚ್,ಉಪ ಮಹಾಪೌರರಾದ ಯಶೋಧ ಹೆಗ್ಗಪ್ಪನವರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಎ ಚೆನ್ನಪ್ಪ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ಹಾಗೂ ವಿವಿಧ ಜನ ಪ್ರತಿನಿಧಿಗಳು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

error: Content is protected !!