ಜ.03 ರಿಂದ ವಿಶ್ವವಿದ್ಯಾನಿಲಯ ಯುವಜನೋತ್ಸವ

ದಾವಣಗೆರೆ :ಜ.02(ಕರ್ನಾಟಕ ವಾರ್ತೆ). ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಇದೇ ಮೊದಲ ಬಾರಿಗೆ ಜನವರಿ 3 ರಿಂದ 10 ರವರೆಗೆ ವಿವಿಧ ಹಂತಗಳಲ್ಲಿ ಯುವಜನೋತ್ಸವ ಏರ್ಪಡಿಸಿದೆ.
ವಿಶ್ವವಿದ್ಯಾನಿಲಯ ವ್ಯಾಪ್ತಿಯ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಒಟ್ಟು 123 ಪದವಿ, ಸ್ನಾತಕೋತ್ತರ ಪದವಿಯ ಸುಮಾರು 48 ಸಾವಿರ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕøತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ ಎರಡು ಸುತ್ತಿನಲ್ಲಿ ಸ್ಪರ್ಧೆ ನಡೆಯಲಿವೆ. ಅಂತಿಮವಾಗಿ ಶಿವಗಂಗೋತ್ರಿ ಯುವಜನೋತ್ಸವವು ವಿಶ್ವವಿದ್ಯಾನಿಲಯದ ಮುಖ್ಯಕೇಂದ್ರದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದ್ದಾರೆ.
ಜನವರಿ 3ರಂದು  ನಗರ ವಲಯದ ಸ್ಪರ್ಧೆಗಳು ಎವಿಕೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ದಾವಣಗೆರೆ ಜಿಲ್ಲಾ ವಲಯದ ಸ್ಪರ್ಧೆಗಳು ಜ.5 ರಂದು ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಆವರಣದ ಸ್ಪರ್ಧೆಗಳು ಜ.6 ರಂದು ನಡೆಯಲಿವೆ. ಜ.4ರಂದು ಚಿತ್ರದುರ್ಗ ಜಿಲ್ಲಾ ವಲಯದ ಸ್ಪರ್ಧೆಗಳನ್ನು ಡಾನ್ ಬಾಸ್ಕೊ ಪದವಿ ಕಾಲೇಜಿನಲಿ ್ಲಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಉತ್ಸವದಲ್ಲಿ ಸ್ಪರ್ಧೆಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಂಗೀತ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ ಏಕವ್ಯಕ್ತಿ (ಹಿಂದೂಸ್ತಾನಿ ಅಥವಾ ಕರ್ನಾಟಕ ಹಾಡುಗಾರಿಕೆ), ಶಾಸ್ತ್ರೀಯ ಸಂಗೀತ (ವಾದ್ಯ), ಶಾಸ್ತ್ರೀಯ ಸಂಗೀತ (ಏಕವ್ಯಕ್ತಿ ತಾಳ ವಾದ್ಯz Àಜೊತೆ), ಶಾಸ್ತ್ರೀಯ ಸಂಗೀತ (ತಾಳವಾದ್ಯ ರಹಿತ), ಲಘು ಸಂಗೀತ (ಭಾರತೀಯ), ಗುಂಪು ಹಾಡುಗಾರಿಕೆ (ಭಾರತೀಯ) ಸ್ಪರ್ಧೆಗಳು ನಡೆಯಲಿವೆ. ನೃತ್ಯ ವಿಭಾಗದಲ್ಲಿ ಜಾನಪದ/ಅಲೆಮಾರಿ ನೃತ್ಯ ಮತ್ತು ಶಾಸ್ತ್ರೀಯ ನೃತ್ಯಗಳನ್ನು ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ.
ಸಾಹಿತ್ಯಿಕ ವಿಭಾಗದಲ್ಲಿ ಕ್ವಿಜ್, ಭಾಷಣ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಗಳು ನಡೆಯಲಿವೆ. ನಾಟಕ ವಿಭಾಗದಲ್ಲಿ ಏಕ ಪಾತ್ರಾಭಿನಯ, ಮೈಮ್ ಮತ್ತು ಮಿಮಿಕ್ರಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಲಾ ವಿಭಾಗದಲ್ಲಿ ಒಟ್ಟು ಏಳು ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಅವುಗಳಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು, ಕೊಲಾಜ್, ಪೋಸ್ಟರ್ ಮೇಕಿಂಗ್, ಮಣ್ಣಿನ ಮೂರ್ತಿ ತಯಾರಿಕೆ, ವ್ಯಂಗ್ಯಚಿತ್ರ, ರಂಗೋಲಿ ಮತ್ತು ಮೆಹಂದಿ ಬಿಡಿಸುವ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ಪ್ರಸ್ತುತ ಕಾರ್ಯಕ್ರಮದ ಆಯೋಜನೆಗಾಗಿ ವಲಯವಾರು ನೋಡಲ್ ಅಧಿಕಾರಿಗಳು ಮತ್ತು ಸಂಯೋಜಕರನ್ನು ನೇಮಕ ಮಾಡಲಾಗಿದೆ. ನಗರಕ್ಕೆ ಎವಿಕೆ ಕಾಲೇಜು ಪ್ರಾಚಾರ್ಯ ಡಾ.ಬಿ.ಪಿ.ಕುಮಾರ ಮತ್ತು ಸಂಯೋಜಕರನ್ನಾಗಿ ಡಾ. ರಣಧೀರ್ ಅವರನ್ನು ನೇಮಿಸಲಾಗಿದೆ. ಜಿಲ್ಲಾ ವಲಯಕ್ಕೆ ಬಿ.ಎಸ್.ಚನ್ನಬಸಪ್ಪ ಕಾಲೇಜಿನ ಪ್ರಾಚಾರ್ಯ ಎಂ.ಸಿ.ಗುರು, ಪಿ.ಅಣ್ಣೇಶ, ಚಿತ್ರದುರ್ಗ ಜಿಲ್ಲಾ ವಲಯಕ್ಕೆ ಡಾನ್ ಬಾಸ್ಕೊ ಕಾಲೇಜಿನ ಡಾ.ಕೆ.ಜೆ.ಜೋಮನ್, ಡಾ.ಧನಕೋಟಿ, ಶಿವಗಂಗೋತ್ರಿ ಆವರಣ ವಲಯಕ್ಕೆ ಪ್ರಾಧ್ಯಾಪಕರ ಡಾ.ಆರ್.ಶಶಿಧರ್ ಮತ್ತು ಡಾ.ಅಶೋಕ ಕುಮಾರ ಪಾಳೇದ ಅವರು ನೇಮಕಗೊಂಡಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!