ಯು ಪಿ ಯಲ್ಲಿ ಕಾರು ಹರಿದು ಮೃತಪಟ್ಟ ರೈತರ ಕುಟುಂಬ ಭೇಟಿ ಮಾಡಲು ಲಖನೌಗೆ ತೆರಳಿದ ರಾಹುಲ್ ಗಾಂದಿ : ಬೆಳಗ್ಗೆ ನೋ ಎಂಟ್ರಿ ಎಂದಿದ್ದ ಯುಪಿ ಸಿಎಂ ಮದ್ಯಾಹ್ನ ಅನುಮತಿ

ನವದೆಹಲಿ : ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಎಸ್‌ಯುವಿ ಹರಿದು ನಾಲ್ವರ ರೈತರು ಮೃತಪಟ್ಟ ನಂತರ ಲಖಿಂಪುರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು , ನಿಷೇಧಾಜ್ಞೆ ವಿಧಿಸಲಾಗಿದೆ. ಈ ನಡುವೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿ ಮಾಡಲು ಲಖನೌಗೆ ತೆರಳಿದ್ದಾರೆ. ಆದರೆ, ರಾಹುಲ್ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಲಖನೌ ಪೊಲೀಸರು ಹೇಳಿದ್ದರು .
ರಾಹುಲ್ ಗಾಂಧಿ , ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಫೇಲ್ , ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಅವರು ನವದೆಹಲಿಯಿಂದ ಲಖನೌಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ . ಲಖಿಂಪುರ ಖೇರಿಗೆ ಭೇಟಿ ನೀಡಲು ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ ಹಾಗೂ ಇತರೆ ಮೂವರು ಮುಖಂಡರಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿರುವುದಾಗಿ ಅಲ್ಲಿನ ಗೃಹ ಇಲಾಖೆ ತಿಳಿಸಿದೆ .

Leave a Reply

Your email address will not be published. Required fields are marked *

error: Content is protected !!