ಮಣ್ಣಿನ ಫಲವತ್ತತೆಗಾಗಿ ಮತ್ತು ಉತ್ತಮ ಇಳುವರಿಗಾಗಿ ಮೈಕ್ರೋಬಿಯಲ್ ಕನ್ಸಾರ್ಷಿಯಂನ ಬಳಕೆ

ಮಣ್ಣಿನ ಫಲವತ್ತತೆಗಾಗಿ ಮತ್ತು ಉತ್ತಮ ಇಳುವರಿಗಾಗಿ ಮೈಕ್ರೋಬಿಯಲ್ ಕನ್ಸಾರ್ಷಿಯಂನ ಬಳಕೆ

ದಾವಣಗೆರೆ : ಮೈಕ್ರೋಬಿಯಲ್ ಕನ್ಸಾರ್ಷಿಯಂ ಒಂದು ಜೈವಿಕ ಗೊಬ್ಬರವಾಗಿದ್ದು, ವಿವಿಧ ಜೈವಿಕ ಗೊಬ್ಬರಗಳಾದ ಸಾರಜನಕ ಸ್ಥಿರೀಕರಿಸುವ ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೋಸ್ಪಿರಿಲಂ ಜೊತೆಗೆ ರಂಜಕ ಕರಗಿಸುವ ಬ್ಯಾಕ್ಟೀರಿಯಾ (PSB) ಪೋಟ್ಯಾಷ್ ಸ್ಥಿರೀಕರಿಸುವ ಬ್ಯಾಕ್ಟೀರಿಯಾ, ಟ್ರೈಕೋಡರ್ಮ, ಸುಡೋಮೊನಾಸ್ ಗಳನ್ನು ಒಳಗೊಂಡಿದೆ.
ಇದನ್ನು ಉಪಯೋಗಿಸುವುದರಿಂದ ಬೆಳೆಗಳ ಬೆಳವಣಿಗೆ, ಇಳುವರಿ ಮತ್ತು ಮಣ್ಣಿನಿಂದ ಹರಡುವ ಅನೇಕ ರೋಗಗಳ ನಿಯಂತ್ರಣ ಅಥವಾ ಹತೋಟಿ ಮಾಡಬಹುದು.
ಉಪಯೋಗಿಸುವ ವಿಧಾನ: ಮೈಕ್ರೋಬಿಯಲ್ ಕನ್ಸಾರ್ಷಿಯಂನ್ನು ಪ್ರತಿ ಟನ್ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರದಲ್ಲಿ 1 ರಿಂದ 5 ಕಿ. ಗ್ರಾಂ ಸೇರಿಸಬೇಕು. ನೆರಳಿನಲ್ಲಿ 5 -10 ದಿನಗಳ ಕಾಲ ತೇವಾಂಶ ಇರುವಂತೆ ‌ಶೇಖರಿಸಿ ನಂತರ ಬೆಳೆಗಳಿಗೆ ನೀಡಬಹುದು.
ಬೀಜೋಪಚಾರ: ಪ್ರತಿ ಕಿಲೋಗ್ರಾಂ ಬೀಜಕ್ಕೆ 10 ರಿಂದ 20 ಗ್ರಾಂ ಮೈಕ್ರೋಬಿಯಲ್ ಕನ್ಸಾರ್ಷಿಯಂನ್ನು ಬಳಸಬಹುದು.

Leave a Reply

Your email address will not be published. Required fields are marked *

error: Content is protected !!