ವಾಜಪೇಯಿ ಎತ್ತಿನಗಾಡಿಯಲ್ಲಿ ಸಂಸತ್ತಿಗೆ ಬಂದಿರಲಿಲ್ಲವೇ.? ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಗೆ ತಿರುಗೇಟು
ಬೆಂಗಳೂರು: ಯುಪಿಎ ಸರ್ಕಾರದಲ್ಲಿ ಇದ್ದಾಗ ಎದುರುಗಡೆ ಮೇಲೆ ಬರಬೇಕಿತ್ತು ಎಂಬ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು 1973ರಲ್ಲಿ ಪಾರ್ಲಿಮೆಂಟ್ ಗೆ ಎತ್ತಿನಗಾಡಿಯಲ್ಲಿ ಬಂದಿರಲಿಲ್ಲವೇ? ಬೆಲೆ ಏರಿಕೆ ವಿರೋಧಿಸಿ ಪಾರ್ಲಿಮೆಂಟ್ ಗೆ ವಾಜಪೇಯಿ ಬಂದಿದ್ದರು.
ಆದರೆ ನಾವು ಎತ್ತಿನಗಾಡಿಯಲ್ಲಿ ಬಂದರೆ ತಪ್ಪಾ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ. ಎಲ್ಪಿಜಿ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆ ಯವರು ತಲೆ ಮೇಲೆ ಸಿಲೆಂಡರ್ ಹೊತ್ತುಕೊಂಡು ಪ್ರತಿಭಟನೆ ಮಾಡಿದರು. ಈಗ ಶೋಭಾಕರಂದ್ಲಾಜೆ ಅವರು ಎಲ್ಲಿ ಹೋಗಿದ್ದಾರೆ? ಎಂದು ಹೇಳಿದರು.
ನಾನು ನಮ್ಮ ರಾಜ್ಯದ ಬಗ್ಗೆ ಕಾಳಜಿಯಿಂದ ಮಾತನಾಡುತ್ತಿದ್ದೇನೆ ಬೇರೆ ರಾಜ್ಯಗಳ ವಿಚಾರ ನನಕೆ ಮಾತನಾಡಲಿ. ಪೆಟ್ರೋಲ್ ಡೀಸೆಲ್ ಮೇಲೆ ನಮ್ಮ ರಾಜ್ಯದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡಲಾಗುತ್ತಿದೆ.
ತಕ್ಷಣ ಅದನ್ನು ಕಡಿಮೆ ಮಾಡಲಿ ಎಂದು ಆಗ್ರಹಿಸಿದರು.
ಯುಪಿಎ ಸರ್ಕಾರ ಸಂದರ್ಭದಲ್ಲಿ ಕಚ್ಚಾತೈಲದ ಡಾಲರ್ ಬೆಲೆ $110 ಮೇಲಿತ್ತು. ಆದರೂ ಕಡಿಮೆ ದರದಲ್ಲಿ ಪೆಟ್ರೋಲ್ ಇಡಲಾಗುತ್ತಿತ್ತು ಈಗ ಕಚ್ಚಾ ತೈಲಗಳ ಬೆಲೆ 70 ಡಾಲರ್ ಇದೆ ಆದರೆ ಪೆಟ್ರೋಲ್ ನೂರರ ಗಡಿ ದಾಟಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 3.45 ರೂ ಪ್ರತಿ ಲೀಟರಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ₹30 ಅಷ್ಟು ಪ್ರತಿ ಲೀಟರ್ ಮೇಲೆ ತೆರಿಗೆ ವಿಧಿಸಲಾಗಿದೆ. ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಲಿ ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.