ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಹಣ್ಣು, ಬಿಸ್ಕತ್ ವಿತರಿಸಿ ವಾಜಪೇಯಿ ಜನ್ಮದಿನಾಚರಣೆ
ದಾವಣಗೆರೆ: ಭಾರತ ದೇಶ ಕಂಡ ಮಹಾನ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 97 ನೇ ಜಯಂತ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಾಜಪೇಯಿ ಅವರ ಜನುಮ ದಿನದ ಅಂಗವಾಗಿ ವೀರ ವನಿತೆಯರ ವೃದ್ದಾಶ್ರಮ ಹಾಗೂ ಶ್ರೀ ಓಂಕಾರ ಹುಚ್ಚನಾಗಲಿಂಗ ಸ್ವಾಮಿ ಅನಾಥ ಸೇವಾಶ್ರಮದಲ್ಲಿ ಹಣ್ಣು, ಬಿಸ್ಕತ್ತು ವಿತರಿಸಿದರು. ಸೇವಾ ಕಾರ್ಯ ಮಾಡುವ ಮೂಲಕ ಅಜಾತಶತ್ರುವಿನ ಹುಟ್ಟುಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾ ಬಿ.ಜೆ.ಪಿ.ಯ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಬಿ.ಜೆ.ಪಿ.ಮುಖಂಡ ಎನ್.ರಾಜಶೇಖರ, ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ .ಸಿ .ಶ್ರೀನಿವಾಸ, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಶಿವನಗೌಡ ಟಿ.ಪಾಟೀಲ್, ಟಿಂಕರ್ ಮಂಜಣ್ಣ,
ಅಣಜಿ ಪ್ರಶಾಂತ್, ಗುಡಿಹಳ್ಳಿ ಬಸವರಾಜ್ ಯವಮೊರ್ಚಾದ ಕಾರ್ಯದರ್ಶಿ ವಿಜಯ ಸಾವಂತ,ತಿಲಕ,ಮಣಿಕಂಠ,ಅರುಣ್ ವಿಜಯ್, ಮತ್ತಿತರರು ಉಪಸ್ಥಿತರಿದ್ದರು.