ವಾಲ್ಮೀಕಿ ನಿಗಮಕ್ಕೆ ಅನುದಾನ ನೀಡಿ ಇಲ್ಲ ಮೂಲ ಕುಲಕಸುಬಾದ ಬೇಟೆಯಾಡಲು ಅನುಮತಿ ನೀಡಿ – ಸಾಮಾಜಿಕ ಕಾರ್ಯಕರ್ತ ಅಂಜು ಕುಮಾರ್
ದಾವಣಗೆರೆ: ಆರ್ಥಿಕವಾಗಿ ಹಿಂದುಳಿದಿರುವ ಬೇಡ ಸಮುದಾಯವನ್ನು ಪುನಶ್ಚೇತನಗೊಳಿಸಲು ಶ್ರಿ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಕೆಲವು ತಿಂಗಳ ಹಿಂದೆ ಮನವಿ ಮಾಡಿದರು ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಂಜುಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಆಶಯದಂತೆ ಸರ್ಕಾರಗಳು ದುರ್ಬಲ ವರ್ಗದವ ಜನರನ್ನು ಪುನಶ್ಚೇತನಗೊಳಿಸಲು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆಯಾದರೂ ಅಗತ್ಯ ಇರುವಷ್ಟು ಅನುದಾನ ಮಂಜೂರು ಮಾಡುತ್ತಿಲ್ಲ. ಈಚೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯವನ್ನು ಮಾಡಿದ್ದು, ಅದಕ್ಕೂ ಪರಿಶಿಷ್ಟ ಪಂಗಡಗಳ ಕಲ್ಯಾಣ ರೂಪಿಸಲು ಹಣ ನಿಡಿಲ್ಲ. ಬದಲಿಗೆ ಸರ್ಕಾರವು ಅನ್ಯ ಸಮುದಾಯಗಳಿಗೆ ಹೊಸದಾಗಿ ಸ್ಥಾಪಿಸಿಸಿರುವ ನಿಗಮಗಳಿಗೆ ತಲಾ ೫೦೦ ಕೋಟಿಯಷ್ಟು ಅನುದಾನವನ್ನು ಮಂಜೂರು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕೂಡಲೇ ವಾಲ್ಮಿಕಿ ಅಭಿವೃದ್ಧಿ ನಿಗಮದ ಮನವಿಯಂತೆ 250 ಕೋಟಿ ಅನುದಾನ ನೀಡಿ, ಕೊರೋನ ಸಂಕಷ್ಟದಿಂದ ತಲ್ಲಣಗೊಂಡಿರುವ ಪರಿಶಿಷ್ಟ ಪಂಗಡದವರ ಬದುಕು ಕಟ್ಟಿಕೊಳ್ಳಲು ಅವಕಾಶ ನಿಡಬೇಕು. ಇಲ್ಲವೇ ಪರಿಶಿಷ್ಟ ಪಂಗಡದವರಿಗೆ (ಬೇಡರಿಗೆ) ತಮ್ಮ ಮೂಲ ಕುಲಕಸುಬಾಗಿರುವ ಬೇಟೆಯನ್ನಾಡಲು ವಿಶೇಷ ಅನುಮತಿಯನ್ನಾದರೂ ನಿಡಬೇಕೆಂದು ಒತ್ತಾಯಿಸಿ, ಅಪರ ಜಿಧಿಕಾರಿ ಪೂಜಾರ್ ವಿರಮಲ್ಲಪ್ಪ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಏಕತಾವೇದಿಕೆಯ ರಾಜ್ಯಾಧ್ಯಕ್ಷ ಎನ್.ಹೆಚ್. ಹಾಲೇಶ್, ಮಾನವ ಹಕ್ಕುಗಳ ರಕ್ಷಣೆ ಕಾರ್ಯದರ್ಶಿ ಪ್ರಕಾಶ್ ಆವರಗೆರೆ, ಬಿ.ಎನ್. ಪಾಲಾಕ್ಷ, ಬಿ. ಬಾಲರಾಜ್, ಮಂಜುನಾಥ ಕುಣೆಬೆಳಕೆರೆ, ನಿಟ್ಟೂರ್ ಅಜಯ್, ಹೆಚ್.ಆರ್. ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.