ವಸತಿ ಸಚಿವರ ನಡವಳಿಕೆ ಅಧಿಕಾರಿಗಳ ವೈಯಕ್ತಿಕ ತೇಜೋವಧೆಯೋ ಆಥವಾ ಭ್ರಷ್ಟಾಚಾರದ ರಕ್ಷಣೆಯೋ.? – ಹರೀಶ್ ಬಸಾಪುರ

IMG-20210822-WA0000

 

ದಾವಣಗೆರೆ: ವಸತಿ ಸಚಿವರು ನಗರದ ಡಿಸಿ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ನಡೆಸಿದ ಸಭೆಯಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ಅಧಿಕಾರಿ ಕಪಿನಿ ಗೌಡ ರವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದು ಎಷ್ಟು ಸರಿ??? ಪ್ರತಿಯೊಬ್ಬರಿಗೂ ಅವರದೇ ಆದ ವೈಯಕ್ತಿಕವಾದ ಗೌರವವಿರುತ್ತದೆ ಅದನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯ ಮಂತ್ರಿಗಳಾದ ತಕ್ಷಣ ನೀವೇನು ದೇವರಲ್ಲ ಮಾತಿನ ಮೇಲೆ ಹಿಡಿತವಿದ್ದರೆ ಒಳ್ಳೆಯದು ಅಲ್ಲವೇ??? ಅವರದ್ದು ತಪ್ಪಿದ್ದರೆ ನೋಟಿಸ್ ನೀಡಿ ಉತ್ತರ ಕೇಳಬೇಕಲ್ಲವೇ???

ಅವರ ಹೊಟ್ಟೆಯ ಬಗ್ಗೆ ಮಾತನಾಡುವುದು, ಕರೋನ ಬಂದು ಎಲ್ಲರೂ ಹೋದರು ನೀನು ಹೋಗಿಲ್ಲ ಎನ್ನುವುದು ಎಷ್ಟು ಸರಿ, ಎಲ್ಲರಿಗೂ ಅವರದೇ ಆದ ವೈಯಕ್ತಿಕ ಜೀವನವಿರುತ್ತದೆ, ಹೆಂಡತಿ ಮಕ್ಕಳು ಇರುತ್ತಾರೆ, ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದು ಸರಿಯೇ ಎಂಬುದನ್ನು ಸಚಿವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ದೊಡ್ಡ ತಿಮಿಂಗಿಲಗಳು, ಸಾಕು ಬಿಡ್ರೋ ಇನ್ನು ಎಷ್ಟು ಮಾಡ್ಕೋತೀರಾ ಎನ್ನುವ ನಿಮ್ಮ ಮಾತಿನ ಅರ್ಥವೇನು???
ಈ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಅದು ನಿಮಗೆ ಗೊತ್ತಿದೆ ಎಂದು ಅರ್ಥವಲ್ಲವೇ??? ಭ್ರಷ್ಟಾಚಾರದ ಮಾಹಿತಿ ಇದ್ದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಲ್ಲವೇ??? ಅದನ್ನು ಬಿಟ್ಟು ಸಭೆಯಲ್ಲಿ ಈ ರೀತಿ ನಡೆದುಕೊಳ್ಳುವ ನಿಮ್ಮ ನಡವಳಿಕೆ ಭ್ರಷ್ಟಾಚಾರದ ಬೆಂಬಲಕ್ಕೂ ಅಥವಾ ಅದರಲ್ಲಿ ಪಾಲಿಗೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡದೇ ಇರದು.

ಇನ್ನು ಶಾಸಕರುಗಳು ತಮ್ಮ ತಮ್ಮ ಕ್ಷೇತ್ರಗಳ ಯೋಜನೆಗಳ ಬಗ್ಗೆ ಚರ್ಚಿಸಲು ಬಂದು ಕಾಣಲು ತಿಳಿಸಿದ್ದಾರೆ ಅದು ಸರಿಯೇ, ಆದರೆ ಮಾನ್ಯ ಸಂಸದರು ದಕ್ಷಿಣ ಕ್ಷೇತ್ರದ ಯೋಜನೆಗಳ ಬಗ್ಗೆ ಬಂದು ನನ್ನನ್ನು ಕಾಣಲು ತಿಳಿಸಿರುವುದು ಎಷ್ಟು ಸರಿ?? ಮಾನ್ಯ ಸಂಸದರೇ ದಕ್ಷಿಣ ಕ್ಷೇತ್ರದ ಬಗ್ಗೆ ಚಿಂತಿಸಲು ಅ ಕ್ಷೇತ್ರದ ಶಾಸಕರು ಇದ್ದಾರೆ, ತಾವು ನಮ್ಮ ಜಿಲ್ಲೆಯ ಸಂಸದರಾಗಿದ್ದು ಅದರ ಬಗ್ಗೆ ಚಿಂತಿಸಬೇಕಾಗಿದೆ, ಕೇಂದ್ರದಿಂದ ಯೋಜನೆಗಳನ್ನು ತಂದು ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಎಂತಹ ಕಾರ್ಯಗಳನ್ನು ಮಾಡಬೇಕಾಗಿದೆ, ಅವುಗಳ ಬಗ್ಗೆ ಗಮನ ಹರಿಸಬೇಕಾಗಿ ಜಿಲ್ಲೆಯ ಮತದಾರನಾಗಿ ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!