ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳು ಮತ್ತು ಮರಳು ವಶ

ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳು ಮತ್ತು ಮರಳು ವಶ

ದಾವಣಗೆರೆ: ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ 3 ಟಿಪ್ಪರ್ ಲಾರಿ, ಒಂದು ಟ್ರ್ಯಾಕ್ಟರ್ ಟ್ರೈಲರ್, ಒಂದು ಜೆಸಿಬಿ ವಾಹನ ಹಾಗೂ ಮರಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಹೊನ್ನಾಳಿ ತಾಲ್ಲೂಕು ಬೀರಗೊಂಡನಹಳ್ಳಿ ಗ್ರಾಮದ ಸಮೀಪ ತುಂಗಭದ್ರಾ ನದಿ ಪಾತ್ರದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಕಳ್ಳತನದಿಂದ ಜೆ.ಸಿ.ಬಿ ಯಂತ್ರದ ಮೂಲಕ ಟಿಪ್ಪರ್ ಲಾರಿಗಳಲ್ಲಿ ಮತ್ತು ಟ್ರಾಕ್ಟರ್ ಟ್ರೈಲರ್ ಗಳಲ್ಲಿ ಮರಳು ತುಂಬಿ ಸಾಗಿಸುತ್ತಿದ್ದಾಗ ಹೊನ್ನಾಳಿ ಪೊಲೀಸರು ಹಾಗೂ ಡಿ.ಸಿ.ಆರ್.ಬಿ. ಘಟಕದ ಸಿಬ್ಬಂದಿ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!