‘ಜಮೀನು ಮಾರಿ ಆಸ್ಪತ್ರೆ ನಿರ್ಮಾಣ’ಕ್ಕೆ ಮುಂದಾಗಿದ್ದಾರೆ ಹಿರಿಯ ನಟಿ ಲೀಲಾವತಿ
ಬೆಂಗಳೂರು: ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ, ತಮ್ಮ ಜಮೀನು ಮಾರಿ ಆಸ್ಪತ್ರೆಯನ್ನು ನಿರ್ಮಾಣ ಮಾಡುವುದಕ್ಕೆ ಕನ್ನಡದ ಹಿರಿಯ ನಟಿ ಲೀಲಾವತಿ ಮುಂದಾಗಿದ್ದಾರೆ. ಹಿರಿಯ ನಟಿ ಲೀಲಾವತಿ ಅವರು ಸಾರ್ವಜನಿಕರಿಗೆ ನೆರವಾಗುವ ಸಲುವಾಗಿ ಮತ್ತೊಂದು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಕಾರಣ ದಿಂದಾಗಿಯೇ ಚೆನ್ನೆನಲ್ಲಿದ್ದಂತ ತಮ್ಮ ಜಮೀನು ಮಾರಾಟ ಮಾಡಿದ್ದು, ನೆಲಮಂಗಲ ತಾಲೂಕಿನ ಸೂಲದೇವನಹಳ್ಳಿಯಲ್ಲಿ ಸೋಮವಾರ ಅಡಿಗಲ್ಲು ಕೂಡ ಹಾಕಿದ್ದಾರೆ. ತಮ್ಮ ತಾಯಿಯ ಆಸೆಯಂತೆ, ಆಸ್ಪತ್ರೆ ನಿರ್ಮಾಣಕ್ಕೆ ನಟ ವಿನೋದ್ ರಾಜ್ ಕುಮಾರ್ ಚಾಲನೆ ಕೂಡ ಕೊಟ್ಟಿದ್ದಾರೆ. ಈ ಬಗ್ಗೆ ಶಾಸಕ ಶ್ರೀನಿವಾಸಮೂರ್ತಿ ಮಾತನಾಡಿ, ನಟಿ ಲೀಲಾವತಿಯವರು, 10 ವರ್ಷಗಳ ಹಿಂದೆ ಸೋಲದೇವನಹಳ್ಳಿಯಲ್ಲಿ ಸಣ್ಣದಾದ ಆಸ್ಪತ್ರೆ ನಿರ್ಮಿಸಿದ್ದರು. ಈಗ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮುಂದಾ ಗಿರುವುದು ಶ್ಲಾಘನೀಯ ಎಂದಿದ್ದಾರೆ. ಮತ್ತೊAದೆಡೆ ಅನಾರೋಗ್ಯದಿಂದಾಗಿ ಪ್ರಸ್ತುತ ಹಿರಿಯ ನಟಿ ಲೀಲಾವತಿ, ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.