ವಿಧವಾ ಸಹೋದರಿಯರ ಮನೆಗೆ ಬಂದು 5 ಕೋಟಿ ಸಾಲ ಕಟ್ಟಿ ಅಂದ್ರು ಬ್ಯಾಂಕ್ ಸಿಬ್ಬಂದಿ.!

ದಾವಣಗೆರೆ: ಸಾಲ ತೆಗೆದುಕೊಳ್ಳದೇ ಬ್ಯಾಂಕಿನವರು ಬರೋಬ್ಬರಿ ₹ 5 ಕೋಟಿ ಸಾಲ ವಸೂಲಿಗೆ ಮನೆಗೆ ಬಂದು ಮೊಕ್ಕಾಂ ಹೂಡಿದರೆ ಪರಿಸ್ಥಿತಿ ಹೇಗಾಗಿರಬಹುದು?
ಈಗ ಇಂತಹದ್ದೇ ಪ್ರಕರಣವೊಂದು ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ನಡೆದಿದೆ. ಇಬ್ಬರು ಅಬಲೆ ಹೆಣ್ಣುಮಕ್ಕಳ ಮನೆಗೆ ಬಂದಿರುವ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿಗೆ ಬಂದಿದ್ದು, ಸಾಲದ ಪರಿವೆಯೇ ಇಲ್ಲದ ಈ ಇಬ್ಬರು ಸಹೋದರಿಯರು ದಿಗ್ಭ್ರಮೆಗೊಂಡಿದ್ದಾರೆ.
ಸಾವಿತ್ರಮ್ಮ ಮತ್ತು ಗೀತಮ್ಮ ಎನ್ನುವವರ ಹೆಸರಲ್ಲಿ ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ನಲ್ಲಿ ಗೀತಮ್ಮ ಹೆಸರಲ್ಲಿ 2.4 ಕೋಟಿ, ಸಾವಿತ್ರಮ್ಮ ಹೆಸರಲ್ಲಿ ರೂ.2 ಕೋಟಿ ರೂ., ಸಾಲವನ್ನು 2013-14ನೇ ಸಾಲಿನಲ್ಲಿ ಈ ಇಬ್ಬರು ಮಹಿಳೆಯರ ಹೆಸರಿನಲ್ಲಿ ಪಡೆಯಲಾಗಿದೆ. ಆದರೆ, ಇವರಿಗೆ ಈ ಬಗ್ಗೆ ಗೊತ್ತೆ ಇಲ್ಲ. ಇದೇಗೆ ಸಾಧ್ಯ ಅಂತೀರಾ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಘಟನೆ ಹಿನ್ನೆಲೆ: ಗೀತಮ್ಮ, ಸಾವಿತ್ರಮ್ಮ ಇವರಿಬ್ಬರು ಸಹೋದರಿಯರು. ಇವರು ಚನ್ನಗಿರಿ ತಾಲೂಕಿನ ಸೋಮ್ಲಾಪುರದವರು. ಇಬ್ಬರು ಸಹೋದರಿಯರು ದಾಗಿನಕಟ್ಟೆಯ ರಂಗಸ್ವಾಮಿ, ಜಗದೀಶ ಎಂಬ ಸಹೋದರರನ್ನು ಮದುವೆಯಾಗಿದ್ದರು. ಆದರೆ, ರಂಗಸ್ವಾಮಿ, ಜಗದೀಶ ಸಹೋದರರು ಮೃತರಾಗಿ 16 ವರ್ಷವಾಗಿತ್ತು.
ಇವರ ಸಹೋದರನಾಗಿದ್ದ ಜಗದೀಶ ಬೆಸ್ಕಾಂ ಉದ್ಯೋಗಿಯಾಗಿದ್ದು, ಜಗದೀಶನ ಪತ್ನಿ ಶೋಭಾ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದರು. ಇಬ್ಬರೂ ಶಿವಮೊಗ್ಗದಲ್ಲಿ ವಾಸವಾಗಿದ್ದರು. ಗೀತಮ್ಮ, ಸಾವಿತ್ರಮ್ಮ ಅವರಿಗೆ ವಿಧವಾ ವೇತನಾ ಮಾಡಿಸಿ ಕೊಡುವುದಾಗಿ ಇಬ್ಬರ ಆಧಾರ ಕಾರ್ಡ್ ಜೆರಾಕ್ಸ್ ಪಡೆದಿದ್ದ ಶೋಭಾ, ಇದೇ ಆಧಾರ ಕಾರ್ಡ್ ಆಧಾರದಲ್ಲಿ ನಕಲಿ ಚಿನ್ನ ಇಟ್ಟು 4.5 ಕೋಟಿ ಸಾಲ ಪಡೆದಿದ್ದರು.
ಇವರ ಹೆಸರಲ್ಲಿ ಬ್ಯಾಂಕಿನ ಯಾವುದೇ ನೋಟಿಸ್ ಬಂದರು ತಮಗೆ ಕಳುಹಿಸುವಂತೆ ಸಹೋದರಿಯರಿಬ್ಬರಿಗೂ ಹೇಳಿದ್ದರು. ಈ ಘಟನೆ ನಡೆದು 7 ವರ್ಷವಾಗಿತ್ತು. ಈ ಸಾಲದ ಬಗ್ಗೆ ಗೀತಮ್ಮ, ಸಾವಿತ್ರಮ್ಮನಿಗೆ ಮಾಹಿತಿಯೂ ಇರಲಿಲ್ಲ.
ಬ್ಯಾಂಕಿನವರು ಮನೆಗೆ ಬಂದಾಗಲೇ ತಮ್ಮ ಹೆಸರಲ್ಲಿ ಶೋಭಾ ಸಾಲ ಮಾಡಿದ್ದು ಗೊತ್ತಾಗಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲು ಆಗ್ರಹಿಸಿರುವ ಸಹೋದರಿಯರು ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.