ವಿದ್ಯುತ್ ಸ್ಪರ್ಶದಿಂದ ಎತ್ತು ಸಾವು
ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಯಲೋಧಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಎತ್ತು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಲೋಧಹಳ್ಳಿ ಗ್ರಾಮದ ರುದ್ರಪ್ಪ ಎನ್ನುವರಿಗೆ ಸೇರಿದ ಎತ್ತು ಹೊಲದಲ್ಲಿ ಕಾರ್ಯ ನಿರ್ವಹಿಸುವಾಗ ಆಕಸ್ಮಿಕವಾಗಿ ಟ್ರಾನ್ಸ್ಫಾರ್ಮರ್ ಬಳಿ ಹೋದಾಗ ವಿದ್ಯುತ್ ಸ್ಪರ್ಶವಾಗಿ ಅಸುನೀಗಿದೆ.
ಕಳೆದ ಕೆಲವು ದಿನಗಳ ಹಿಂದೆ 1ಲಕ್ಷದ 60ಸಾವಿರ ರೂಪಾಯಿಗಳಿಗೆ ಎರಡು ಎತ್ತುಗಳನ್ನು ಖರೀದಿಸಿದ್ದ ರುದ್ರಪ್ಪ ಈಗ ಒಂದು ಎತ್ತು ಅಸುನೀಗಿದ್ದು ಇದರ ಬೆಲೆ 80 ಸಾವಿರ ಎಂದು ಅಂದಾಜಿಸಲಾಗಿದೆ.