ವಿಜೃಂಭಣೆಯಿಂದ ಜರುಗಿದ ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೆಂಡಾರ್ಚನೆ

IMG-20210903-WA0001

 

ದಾವಣಗೆರೆ: ಹೊನ್ನಾಳಿ ಪುರಾಣ ಇತಿಹಾಸ ಪ್ರಸಿದ್ದ ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮೀಜಿ ಮಹಾ ರಥೋತ್ಸವ ಶುಕ್ರವಾರ ನೂರಾರು ಭಕ್ತ ಸಮೂಹದ ನಡುವೆ ಶುಕ್ರವಾರ ಸೂರ್ಯಉದಯಕ್ಕೆ ಕೋವಿಡ್ ಕಾರಣದಿಂದಾಗಿ ಸರಳವಾಗಿ ನೆರವೇರಿತು.

ಮಧ್ಯ ಕರ್ನಾಟಕದಲ್ಲೇ ಪುರಾಣ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಶ್ರಿ ಚನ್ನಪ್ಪ ಸ್ವಾಮೀಜಿ ಹಿರೇಕಲ್ಮಠದಲ್ಲಿ ಒಂದುತಿಂಗಳ ಕಾಲ ಶ್ರಾವಣ ಮಾಸದ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು ಶುಕ್ರವಾರ ಭವ್ಯವಾಗಿ ಆಲಂಕೃತಗೊಂಡ ಮಹಾ ರಥೋತ್ಸವ ಮಠದ ಪ್ರಾಂಗಣದಲ್ಲಿ ರಥ ಮೆರವಣಿಗೆ ನಡೆಯಿತು.

ಶುಕ್ರವಾರ ಪ್ರಾತಃಕಾಲದಲ್ಲೇ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಪೀಠಾಧ್ಯಾಕ್ಷ ಶ್ರೀಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಯ ಸಮ್ಮುಖದಲ್ಲಿ ಕ್ಷೇತ್ರದ ಶ್ರೀಜಗದ್ಗುರು ಪಂಡಿತರಾಧ್ಯರ ಮೂರ್ತಿ, ಶ್ರೀಜಗದ್ಗುರು ಜಡೆಯಶಂಕರ ಶಿವಾಚಾರ್ಯ ಮಹಾಸ್ವಾಮೀಜಿಯ, ಶ್ರೀಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಯ, ಶ್ರೀಚನ್ನಪ್ಪಸ್ವಾಮೀಜಿಯ, ಶ್ರಿ ಗುರುಬಸವ ಮಹಾಸ್ವಾಮೀಜಿಯ, ಶ್ರೀ ಒಡೆಯರ್ ಮತ್ಯುಂಜಯ ಶಿವಾಚಾರ್ಯ ಮಹಾ ಸ್ವಾಮೀಜಿ , ಶ್ರೀಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಯ ಕರ್ತೃಗದ್ದುಗೆಗಳಿಗೆ ಹಾಗೂ ಶ್ರೀ ವೀರಭದ್ರೇಶ್ವರಮೂರ್ತಿಗೆ ಮತ್ತು ಶ್ರೀ ಮಾರಿಕೊಪ್ಪದ ಹಳದಮ್ಮ ದೇವಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ದೀಪೋತ್ಸವ ಮಹಾಮಂಗಳಾರತಿಯ ವಿಶೇಷ ಪೂಜಾ ಕೈಂಕರ್ಯಗಳ ಪೂಜೆ ನಡೆದವು.

ಸೂರ್ಯ ಉದಯಕ್ಕೆ ಹಿರೇಕಲ್ಮಠದ ಪೀಠಾಧ್ಯಾಕ್ಷ ಶ್ರೀಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರನ್ನು ಪಲ್ಲಕ್ಕಿ ಮಹೋತ್ಸವವು ಹಿರೇಕಲ್ಮಠದಿಂದ ಮಂಗಳವಾದ್ಯ ಮಠದ ಪ್ರಾಂಗಣದಲ್ಲಿ ನಡೆದು ಪಂಚಪೀಠದ ಥ್ವಜ,ವಿವಿಧ ಹೊವುಗಳು,ಹಸಿರುತಳಿರು ತೋರಣಗಳಿಂದ ಭವ್ಯ ಅಲಂಕೃತಗೊಂಡಿದ್ದ ಶ್ರೀಚನ್ನಪ್ಪಸ್ವಾಮೀಜಿ ಮಹಾರಥೋತ್ಸವಕ್ಕೆ ಪುರೋಹಿತರ ವೇದಮಂತ್ರಗಳ ಘೋಷಣೆಯೊಂದಿಗೆ ಮಹಾಪೊಜೆ,ರಥದ ಗಾಲಿಗೆ ಬಲಿಅನ್ನ ಸೇರಿದಂತೆ ವಿವಿಧ ಧಾರ್ಮಿಕಪೊಜೆಗಳು ನಡೆದು

ಸ್ವಾಮೀಜಿ ರಥಾರೋಹಣವ ಗೈಯುತ್ತಿದ್ದಂತೆಯೇ ನೆರೆದಿದ್ದ ನೂರಾರು ಭಕ್ತರು ಜಗದ್ಗುರು ಪಂಚಾಚಾರ್ಯ ಮಹಾರಾಜಕೀ ಜೈ, ಶ್ರೀಚನ್ನಪ್ಪಸ್ವಾಮೀಜಿ ಮಹಾತ್ಮೆಕೀ ಜೈ, ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಕೀ ಜೈ ಮಾನವಧರ್ಮಕ್ಕ ಜಯವಾಗಲಿ ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ಜಯಕಾರಗಳ ಘೋಷಣೆಯನ್ನು ಮಾಡಿದರು.

ಶ್ರೀಗಳು ಆಸೀನರಾಗಿದ್ದ ರಥ ಮಠದ ಪ್ರಾಂಗಣದಲ್ಲಿ ಶ್ರೀಚನ್ನಪ್ಪಸ್ವಾಮೀಜಿ ಮಹಾರಥೋತ್ಸವದ ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ಜನತೆ ಶ್ರೀಗಳಿಗೆ ಪೂಜೆಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಮಹಾರಥೋತ್ಸವಕ್ಕೆ ಸಂಗೀತ ವಾದ್ಯಗಳು, ಗಜರಾಜನ ವಿವಿಧವಿ ನೋದಾವಳಿಗಳು ಮೆರಗು ನೀಡಿದವು, ಮಹಾರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯಿತು.

ಹೊನ್ನಾಳಿಃ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಶ್ರೀಚನ್ನಪ್ಪಸ್ವಾಮೀಜಿ ಮಹಾರಥೋತ್ಸವ ಅಂಗವಾಗಿ ಹಿರೇಕಲ್ಮಠದ ಆವರಣದಲ್ಲಿ ಶ್ರೀವೀರಭದ್ರೇಶ್ವರಸ್ವಾಮಿಯ ಕೆಂಡದಾರ್ಚನೆ ನೂರಾರು ಭಕ್ತ ಸಮೂಹದ ನಡುವೆ ಶುಕ್ರವಾರ ಸೂರ್ಯಉದಯಕ್ಕೆ ಕೋವಿಡ್ ಕಾರಣದಿಂದಾಗಿ ಸರಳವಾಗಿ ನೆರವೇರಿತು.

ಮಧ್ಯ ಕರ್ನಾಟಕದ ಪುರಾಣ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಹೊನ್ನಾಳಿ ಶ್ರಿ ಚನ್ನಪ್ಪ ಸ್ವಾಮೀಜಿ ಹಿರೇಕಲ್ಮಠದಲ್ಲಿ ಒಂದುತಿಂಗಳ ಕಾಲ ಶ್ರಾವಣ ಮಾಸದ ಅಂಗವಾಗಿ ಬೆಳಿಗ್ಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಶಿವದೀಕ್ಷಾ ಹಾಗೂ ಸಂಜೆ ಪುರಾಣ ಪ್ರವಚನ , ಧರ್ಮಸಭೆ ಕಾರ್ಯಕ್ರಮ ನಡೆಯುತ್ತದೆ ಅಲ್ಲದೆ ಶ್ರಾವಣದ ಕಡೆ ಮಂಗಳವಾರ ಅಥವಾ ಶುಕ್ರವಾರದಂದು ಶ್ರೀಚನ್ನಪ್ಪಸ್ವಾಮೀಜಿ ಮಹಾರಥೋತ್ಸವ , ಶ್ರೀವೀರಭದ್ರೇಶ್ವರಸ್ವಾಮಿಯ ಕೆಂಡದಾರ್ಚನೆ ನಡೆಯುತ್ತೆ ಅದರೆ ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಇತಿಹಾಸದಲ್ಲಿ ಎರಡನೇ ಬಾರಿಗೆ ಸರಳವಾಗಿ ಹಾಗೂ ಬೆಳಗಿನಜಾವದಲ್ಲಿ ಶ್ರೀಚನ್ನಪ್ಪಸ್ವಾಮೀಜಿ ಮಹಾರಥೋತ್ಸವ ಶ್ರೀವೀರಭದ್ರೇಶ್ವರಸ್ವಾಮಿಯ ಕೆಂಡದಾರ್ಚನೆ ನಡೆದಿದೆ.

ಮಠದ ಅವರಣದಲ್ಲಿರುವ ಶ್ರೀವೀರಭದ್ರೇಶ್ವರಸ್ವಾಮಿ ವಾದ್ಯ ಮೇಳದೊಂದಿಗೆ ಶ್ರೀವೀರಭದ್ರೇಶ್ವರ ಸ್ವಾಮಿ ದೇವರ ಉತ್ಸವಮೂರ್ತಿ ಪಲಕ್ಕಿಯಲ್ಲಿ ಹೊತ್ತು ವೀರಗಾಸೆ ಒಡಪುಗಳನ್ನು ಹಾಡುತ್ತ ಕೆಂಡದ ಪ್ರಾಂಗಣಕ್ಕೆ ದೇವತಾ ಉತ್ಸವ ಬಂದಿತು. ಮುಖಂಡರು ಅರ್ಚಕರು ಅಗ್ನಿಕುಂಡವನ್ನು ಸಿದ್ದಗೊಳಿಸಿ ಸಾಂಪ್ರಧಾಯಿಕ ಪೂಜಾವಿಧಿಗಳು ಮತ್ತು ನೈವೇದ್ಯೆಯನ್ನು ಸಮರ್ಪಣೆ ಮಾಡಿದರು.

ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ ಶ್ರೀಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕೆಂಡದರಾಶಿ ಹಾಗೂ ವೀರಭದ್ರೇಶ್ವರರಿಗೆ ಪೂಜೆ ಸಲ್ಲಿಸಿದ ಬಳಿಕ ದೇವತಾ ಪಲಕ್ಕಿ ಹೊತ್ತವರು ಭಗವಂತನ ನಾಮಸ್ಮರಣೆ ಮಾಡುತ್ತ ಕೆಂಡದ ರಾಶಿಯನ್ನು ಹಾಯ್ದರು. ನೂರಾರು ಹರಿಕೆ ಹೊತ್ತ ಭಕ್ತರು ಕೆಡದ ಮೇಲೆ ನಡೆಯುವ ಮೂಲಕ ಶ್ರೀವೀರಭದ್ರೇಶ್ವರಸ್ವಾಮಿ ದೇವರಿಗೆ ಹರಿಕೆ ತೀರಿಸಿದರು.

ಕೆಂಡದಾರ್ಚನೆಯ ಮೊದಲು ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಯಿಂದ ಶ್ರೀಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯ ಸಮ್ಮುಖದಲ್ಲಿ ಕ್ಷೇತ್ರದ ಶ್ರೀಜಗದ್ಗುರು ಪಂಡಿತರಾಧ್ಯರ ಮೂರ್ತಿ, ಶ್ರೀಜಗದ್ಗುರು ಜಡೆಯಶಂಕರ ಶಿವಾಚಾರ್ಯ ಮಹಾಸ್ವಾಮೀಜಿಯ, ಶ್ರೀಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಯ, ಶ್ರೀಚನ್ನಪ್ಪಸ್ವಾಮೀಜಿಯ, ಶ್ರಿ ಗುರುಬಸವ ಮಹಾಸ್ವಾಮೀಜಿಯ, ಶ್ರೀ ಒಡೆಯರ್ ಮತ್ಯುಂಜಯ ಶಿವಾಚಾರ್ಯ ಮಹಾಸ್ವಾಮೀಜಿಯ , ಶ್ರೀಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಯ ಕರ್ತೃಗದ್ದುಗೆಗಳಿಗೆ ಹಾಗೂ ಶ್ರೀ ವೀರಭದ್ರೇಶ್ವರಮೂರ್ತಿಗೆ ಮತ್ತು ಶ್ರೀ ಮಾರಿಕೊಪ್ಪದ ಹಳದಮ್ಮ ದೇವಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ದೀಪೋತ್ಸವ ಮಹಾಮಂಗಳಾರತಿಯ ವಿಶೇಷ ಪೂಜಾ ಕೈಂಕರ್ಯಗಳ ಪೂಜೆ ನಡೆದವು.

Leave a Reply

Your email address will not be published. Required fields are marked *

error: Content is protected !!