ಲೋಕಲ್ ಸುದ್ದಿ

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘಕ್ಕೆ  ನೂತನವಾಗಿ ವೀರೇಶ್ .ಎಸ್ . ಒಡೇನಪುರ ಆಯ್ಕೆ.

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘಕ್ಕೆ  ನೂತನವಾಗಿ ವೀರೇಶ್ .ಎಸ್ . ಒಡೇನಪುರ ಆಯ್ಕೆ.

ದಾವಣಗೆರೆ :ದಾವಣಗೆರೆ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಕಚೇರಿಯಲ್ಲಿ ಇಂದು ಸಂಜೆ 7:00 ಗಂಟೆಗೆ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಿ ಪಾಲಾಕ್ಷಿಯವರು ಸಭೆ ಕರೆದು ಅವರ ಅಧಿಕಾರದ ಅವಧಿ ಮುಗಿದ ಕಾರಣ ಅವರ ಸ್ಥಳಕ್ಕೆ ನೂತನವಾಗಿ ಆಯ್ಕೆಯಾದ ಪಿ.ಡಬ್ಲ್ಯೂ.ಡಿ . ಇಲಾಖೆಯ. ಕಚೇರಿಯ   ಆದೀಕ್ಷಕರು ಆಗಿ ಸೇವೆ ಸಲ್ಲಿಸುತ್ತಿರುವ ವೀರೇಶ್ ಎಸ್ . ಒಡೇನಪುರ ಇವರಿಗೆ ಬಿ. ಪಾಲಾಕ್ಷ ಅವರು ಹೂ ಗುಚ್ಚ ನೀಡುವ ಮೂಲಕ ಅಧಿಕಾರ ವನ್ನು ಹಸ್ತಾಂತರ ಮಾಡಲಾಯಿತು. ನೂತನವಾಗಿ  ಅಧಿಕಾರವನ್ನು ಸ್ವೀಕರಿಸಿ ಸಭೆಯಲ್ಲಿ ಮುಂದುವರೆದು ಮಾತನಾಡುತ್ತಾ. ಈ ಹಿಂದೆ ಅಧ್ಯಕ್ಷರಿಗೆ ನೀಡಿದ ಎಲ್ಲಾ ಸಹಕಾರವನ್ನು ನಮಗೆ ನೀಡುವಂತೆ ಸಭೆಯಲ್ಲಿ ನೂತನ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯ ಅಧ್ಯಕ್ಷರಾದ ಗುರುಮೂರ್ತಿ. ಸಿ.   ಜಿಲ್ಲಾ  ಖಜಾಂಚಿಯಾದ .ಬಿ .ಆರ್. ತಿಪ್ಪೇಸ್ವಾಮಿ. ಪ್ರಭಾರಿ ರಾಜ್ಯ ಪರಿಷತ್ ಸದಸ್ಯರಾದ. ಲೋಕಣ್ಣ   ಮಾಗೋಡ್ರು. ಗೌರವ ಅಧ್ಯಕ್ಷರಾದ .ಡಾಕ್ಟರ್. ಉಮೇಶ್ .ಬಿ. ಜಗಳೂರು ತಾಲೂಕು ನೌಕರ ಸಂಘದ ಅಧ್ಯಕ್ಷರಾದ  ಬಿ .ಆರ್ .ಚಂದ್ರಪ್ಪ.  ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ವಾರ್ತಾ ಇಲಾಖೆಯ ಬಿ .ಎಸ್. ಬಸವರಾಜು . ಜಿಲ್ಲಾ ಖಜನೀಯ ಜುಬೇರ ಹಾಗೂ ಸಂಘದ ಎಲ್ಲಾ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top