ಅಧಿಕಾರದಲ್ಲಿ ನಿಜವಾದ ಬಸವಣ್ಣನ ಆಶಯದಂತಿರುವ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ: ಬಾಡದ ಆನಂದರಾಜು
ದಾವಣಗೆರೆ : ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುತ್ತೇವೆ ಆದರೆ ಎಲ್ಲಾ ಅಧಕಾರಿಗಳು ದೇವರ ಕೆಲಸ ಎಂದು ಮಾಡುವುದು ಅಪರೂಪ. ಇದಕ್ಕೆ ಅಪವಾದ ವೆಂಬಂತೆ ಎಲ್ಲರಿಗೂ ಮಾದರಿಯಾಗಿ ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರಾದ ವಿಶ್ವನಾಥ ಮುದ್ದಜ್ಜಿಯವರು ಎಂದು ಅವರು ಬಂದು ಎರಡು ವರ್ಷ ಪೂರೈಸುದ ಹಿನ್ನಲೆ ಅನೇಕ ಸಂಘ ಸಂಸ್ಥೆಗಳ ಮುಖಂಡರಗಳು ಅಭಿಮಾನದಿಂದ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡುತ್ತಾ ಸದಾ ಬಡವರ ಬಗ್ಗೆ ಕಾಳಜಿವಹಿಸುವ ಇವರು ಸಾರ್ವಜನಿಕ ಸೇವೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಭ್ರಷ್ಟಾಚಾರ ಇಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಿಬ್ಬಂದಿ ಜೊತೆ ಸದಸ್ಯರ ಜೊತೆ ವಿಶ್ವಾಸದಿಂದ ಕೆಲಸ ಮಾಡುತ್ತಾ ಮಾದರಿ ಅಧಿಕಾರಿಯಾಗಿದ್ದಾರೆ ಎಂದು ಬಾಡದ ಆನಂದರಾಜ್ ಮಾತನಾಡಿದರು ನಂತರ ಕಾಂಗ್ರೆಸ್ ಎಸ್ಸಿ ಘಟಕದ ರಾಜ್ಯ ಪ್ರ ಕಾರ್ಯಧರ್ಶಿ ಸೋಮಲಾಪುರ ಹನುಮಂತಪ್ಪನವರು ಪೌರ ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿರಿವ ಇವರಿಗೆ ತಿಂಗಳಿಗೆ ಸರಿಯಾಗಿ ವೇತನ ಸಿಗುವಂತೆ ಮಾಡಿದ್ದಾರೆ. ನಿವೃತ್ತಿ ಹೊಂದಿದ ಪೌರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಬಿಜೆಪಿ ಕಾಂಗ್ರೆಸ್ ಪಕ್ಷದ ಶಾಸಕರ ಮತ್ತು ಪಾಲಿಕೆ ಸದಸ್ಯರ ನಡುವೆ ಸರ್ವರನ್ನು ವಿಶ್ವಾಸಕ್ಕೆ ತೆಗದುಕೊಂಡು ಯಾವುದೇ ಗೊಂದಲಕ್ಕೆ ಹೆಡಮಾಡಿಕೊಡದೇ ನೊಂದವರಿಗೆ ಬಡವರಿಗೆ ಪಕ್ಷಾತೀತವಾಗಿ ಸದಾ ಸಹಾಯ ಹಸ್ತ ತೋರಿ ಇತಿಹಾಸದಲ್ಲೇ ಮಹಾನಗರ ಪಾಲಿಕೆಯಲ್ಲೇ ಜನ ಮೆಚ್ಚಿದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ಯವರ ಕಾರ್ಯ ವಿಶ್ವಗುರು ಬಸವಣ್ಣನವರಂತೆ ಸಾಮಾಜಿಕ ನ್ಯಾಯ ನೀಡು ಲ್ಲಿ ಮುಂದಾಗಿದ್ದಾರೆ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಾರಿ ನಗರ ದೇವತೆ ದುರ್ಗಾಂಭಿಕ ದೇವಿ ಜಾತ್ರೆಯನ್ನ ಯಾವುದೇ ಗೊಂದಲ ವಿಲ್ಲದೇ ಯಶಸ್ವಿಯಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ ಅವರು. ಸರಳತೆಗೆ ಮನೆ ಮಾತಾಗಿರುವ ವಿಶ್ವನಾಥ್ ಅವರು ಕಾರ್ಯ ವೈಖರಿ ಮೆಚ್ಚಿ ಸನ್ಮಾನ ಮಾಡಲಾಯಿತು.. ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೇಲ್.ಬಿಜೆಪಿ ಹಿರಿಯಾ ಮುಖಂಡ ಕೊಂಡಜ್ಜಿ ಜಯಪ್ರಕಾಶ್.ಒಣರೊಟ್ಟಿ ಮಹಂತೇಶ್.ಡಿಎಸ್ಸೆಸ್ ಮುಖಂಡ ಟಿ.ಬಸವರಾಜ್.ಉಪ್ಪಾರ ಯುವ ವೇದಿಕೆ ಜಿಲ್ಲಾಧ್ಯಕ್ಷ ಎನ್ ಬಿ ಎ.ಲೋಕೇಶ್.ರಮೇಶ್ ನಾಯ್ಕ್.ತಿಪ್ಪೇಸ್ವಾಮಿ ಇನ್ನೂ ಮುಂತಾದವರು ಪಕ್ಷಾತೀತವಾಗಿ ಅಭಿನಂಧಿಸಿದರು.