ದಾವಣಗೆರೆ : ಹೊನ್ನಾಳಿ ಕಲಾವಿದ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ರೂಪಾದರ್ಶಿ ಕಲಾತಂಡ ರಿಂದ ಸ್ವೀಪ್ ಯೋಜನೆ ಅಡಿಯಲ್ಲಿ ಮತದಾನ ಜಾಗೃತಿ ಅಭಿಯಾನ ನೆಡೆಸಲಾಯಿತು.
ಕಡ್ಡಾಯ ಮತದಾನ ಮಾಡುವ ಮುಖಾಂತರ ಸಮಾಜದ ಏಳ್ಗೆಗಾಗಿ, ರಾಜ್ಯದ ಅಭಿವೃದ್ಧಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಬೀದಿ ನಾಟಕ ಜಾಗೃತಿ ಗೀತೆಗಳ ಮೂಲಕ ಸಾಮಾಜಿಕ ಕಳಕಳಿಯ ನಾಟಕ ಜಾಗೃತಿ ಗೀತೆಗಳ ಪ್ರಸ್ತುತ ಪಡಿಸಿದ ಕಲಾತಂಡ ಮದನಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು ಬಸವನಹಳ್ಳಿ ವ್ಯಾಪ್ತಿ ಯಲ್ಲಿ ಪಂಚಾಯಿತಿ ಸಿಬ್ಬಂದಿ, ಆಶಾ ಕಾರ್ಯಕರ್ತೆರು, ಕಲಾವಿದ ಐರಣೆ ಚಂದ್ರ, ಕೆ ಬಾನಪ್ಪ,ಕುಕ್ಕುವಾಡ ಮಹಾಂತೇಶ್, ಶೌಕತ್ , ಮಲ್ಲಿಕಾರ್ಜುನ ಅವರಗೆರೆ,ಖಾದರ್, ಜ್ಯೋತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
