ಲೋಕಲ್ ಸುದ್ದಿ

ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಮತದಾನ ವಂಚಿತರಾಗಿ ದೂಷಿಸುವುದು ಸರಿಯಲ್ಲ: ಸುರೇಶ್ ಹಿಟ್ನಾಳ್

ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಮತದಾನ ವಂಚಿತರಾಗಿ ದೂಷಿಸುವುದು ಸರಿಯಲ್ಲ: ಸುರೇಶ್ ಹಿಟ್ನಾಳ್

ದಾವಣಗೆರೆ : ಭಾರತ ಸಂವಿಧಾನ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿದೆ. ಮತದಾನ ಹಕ್ಕು ಮಾತ್ರವಲ್ಲದೇ ಜವಾಬ್ದಾರಿ ಸಹ ಆಗಿದೆ. ಮತದಾನ ಮಾಡದೇ ಜನಪ್ರತಿನಿಧಿಗಳನ್ನು ದೂಷಿಸುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಹಿಟ್ನಾಳ್ ಅವರು ತಿಳಿಸಿದರು.

ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚನ್ನಗಿರಿಯಲ್ಲಿ ಮತದಾನ ಜಾಗೃತಿ ಅಭಿಯಾನ ಭಾಗವಾಗಿ ಭಾನುವಾರ ಆಯೋಜಿಸಿದ್ದ ಸಾಹಸ ಜಲ ಕ್ರೀಡೆಯಲ್ಲಿ ಭಾಗವಹಿಸಿ, ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಮತದಾನ ವಂಚಿತರಾಗಿ ದೂಷಿಸುವುದು ಸರಿಯಲ್ಲ: ಸುರೇಶ್ ಹಿಟ್ನಾಳ್

ಮತದಾನದ ಜವಾಬ್ದಾರಿಯಿಂದ ನುಣುಚಿಕೊಂಡು ಆಶೋತ್ತರಗಳನ್ನು ಈಡೇರಿಸದವರನ್ನು ದೂಷಿಸುವುದು ತರವಲ್ಲ, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಪ್ರಶ್ನಿಸುವ ಹಕ್ಕನ್ನು ಪಡೆಯಬಹುದು ಎಂದರು.

ಕಳೆದ ಚುನಾವಣೆಯಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.79.91ರಷ್ಟು ಮತದಾನ ಪ್ರಮಾಣ ದಾಖಲಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಶೇ.90ರಷ್ಟು ಮತದಾನದಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಜ್ಞಾವಂತರಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಮತದಾನ ವಂಚಿತರಾಗಿ ದೂಷಿಸುವುದು ಸರಿಯಲ್ಲ: ಸುರೇಶ್ ಹಿಟ್ನಾಳ್

ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಮತಕೇಂದ್ರಗಳಲ್ಲಿ ಯಾವುದೇ ರೀತಿಯಾದ ಸಮಸ್ಯೆ ಉಂಟಾಗದ ಹಾಗೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಅಗತ್ಯ ಸಿದ್ಧತೆ ಸಹ ಒದಗಿಸಲಾಗುತ್ತಿದೆ ಎಂದರು.

ಸಾರ್ವಜನಿಕರು ಯುವ ಮತದಾರರು ಬೋಟಿಂಗ್ ಪ್ರಯಾಣ ಕೈಗೊಂಡರು.

ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಮತದಾನ ವಂಚಿತರಾಗಿ ದೂಷಿಸುವುದು ಸರಿಯಲ್ಲ: ಸುರೇಶ್ ಹಿಟ್ನಾಳ್

ಕೆರೆಯಲ್ಲಿ ಕಡ್ಡಾಯ ಮತದಾನದ ಜಾಗೃತಿ ಫಲಕಗಳನ್ನು ತೇಲಿಬಿಟ್ಟು ಜಾಗೃತಿ ಮೂಡಿಸಲಾಯಿತು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!