ಮತದಾನದ ಜಾಗೃತಿ ಕ್ಯಾಂಡಲ್ ಜಾಥಾ

ದಾವಣಗೆರೆ : ಮತದಾನದ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ನಗರದ ಇಂದು ಮೋತಿ ಸರ್ಕಲ್‍ನಲ್ಲಿ ಕ್ಯಾಂಡಲ್ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಹಿಟ್ನಾಳ್ ಚಾಲನೆ ನೀಡಿದರು.
ಮೋತಿ ಮಹಲ್‍ಸರ್ಕಲ್ ನಿಂದ ಅರುಣ ಸರ್ಕಲ್ ರವರೆಗೂ ಕ್ಯಾಂಡಲ್ ಜಾಥಾ ಬೆಳಕಿನಲ್ಲಿ ಮತದಾನದ ಜಾಗೃತಿ ಸಂದೇಶದೊಂದಿಗೆ ವಿವಿಧ ಅಧಿಕಾರಿಗಳೊಂದಿಗೆ ಜಿಲ್ಲಾ ಸ್ವೀಪ್ ರಾಯಾಭಾರಿ ಪೃಥ್ವಿ ಶಾಮನೂರು ಜೊತೆಗೂಡಿ ಕಾಲೇಜು ವಿದ್ಯಾರ್ಥಿಗಳು ಕ್ಯಾಂಡಲ್ ಬೆಳಕಿನೊಂದಿಗೆ ಭಾಗವಹಿಸಿದ್ದರು.
ಈ ವೇಳೆ ಆಯುಕ್ತರಾದ ರೇಣುಕಾ, ಜಿಲ್ಲಾ ಸ್ವೀಪ್ ರಾಯಾಭಾರಿ ಪೃಥ್ವಿ ಶಾಮನೂರು ಸಮಾಜ ಕಲ್ಯಾಣ ಇಲಾಖೆಯ ನಾಗರಾಜ, ಡಿಡಿಪಿಐ ತಿಪ್ಪೇಶಪ್ಪ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಾಸಂತಿ ಉಪ್ಪಾರ್ ಉಪಸ್ಥಿತಿರಿರಿದ್ದರು