ವೃದ್ಧಾಶ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ಜನ್ಮ ದಿನಾಚರಣೆ

IMG-20210906-WA0027

 

ದಾವಣಗೆರೆ: ದಾವಣಗೆರೆ ತಾಲೂಕ್ ತುರ್ಚಘಟ್ಟದ ಸಾಧನಾ ವೃದ್ದಶ್ರಮ ಮತ್ತು ಅನಾಥ ಆಶ್ರಮದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದೇವರಮನಿ ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಿವನಗೌಡ ಟಿ.ಪಾಟೀಲ ಮಾತನಾಡಿ ದೇವರಮನಿ ಶಿವಕುಮಾರ್ ಅವರು ಹೇಸರಿಗೆ ಅಷ್ಟೇ ದೇವರಮನಿ ಅಲ್ಲ ಕರೋನ ಸಂಕಷ್ಟ ಸಂದರ್ಭದಲ್ಲಿ ಹಲವಾರು ಬಡ ಕುಟುಂಬಗಳಿಗೆ ಅಂಗವಿಕಲರಿಗೆ, ಅಸಂಘಟಿತ ಕಾರ್ಮಿಕರಿಗೆ, ಅರ್ಚಕರಿಗೆ ಮತ್ತು ಕರೋನ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಹಲವಾರು ಸಂಘಟನೆಗಳಿಗೆ ನೆರವು ಆಗುವ ಮೂಲಕ ಮಾನವಿತೆ ಮೇರದಿದ್ದಾರೆ ಇಂತಹ ಜನಪರ ಕಾಳಜಿಯುಳ್ಳವುರ ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವೀರಶೈವ ಯುವ ಮುಖಂಡರಾದ ದೇವರಮನಿ ಮುರುಗೇಶ್ , ಅಕ್ಕಿ ವರ್ತಕರು ಬಿ.ಜೆ.ಪಿ ಯುವ ಮುಖಂಡರಾದ ಜಯಪ್ರಕಾಶ್ ಮಾಗಿ,ಟಿಂಕರ್ ಮಂಜಣ್ಣ,ದೇವೇಂದ್ರಪ್ಪ,ಶಿವಮೂರ್ತಪ್ಪ,ರುದ್ರೇಶ್,ಅಭಿಷೇಕ್, ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಸಂಸ್ಥೆಯ ಅದ್ಯಕ್ಷರಾದ ಪುಷ್ಪಲತಾ
ವೀರಶೈವ ಪಂಚಮಸಾಲಿ ಮಹಿಳಾ ಘಟಕ ಜಿಲ್ಲಾಧ್ಯಕ್ಷರು ನಿರ್ಮಲ ಸಮಾಜ ಸೇವಕರು ಶ್ರೀಮತಿ ವೀಣಾ ಕೊಟ್ರೇಶ್ ವೀರಶೈವ ಪಂಚಮಸಾಲಿ ಪ್ರಧಾನ ಕಾರ್ಯದರ್ಶಿ ಮತ್ತಿತರರು ಇದ್ದರು

Leave a Reply

Your email address will not be published. Required fields are marked *

error: Content is protected !!