ಭಾರತೀಯ ಸೇನೆಗೆ ನೀರು ಮತ್ತು ವಿದ್ಯುತ್ ಪೂರೈಕೆ ನಿಲ್ಲಿಸಿ ಬಿಡುವೆ

ಹೈದ್ರಾಬಾದ್: ಭಾರತೀಯ ಸೇನೆ ಕಾರಣವೇ ಇಲ್ಲದೇ ಸಾರ್ವಜನಿಕ ರಸ್ತೆಗಳನ್ನ ಮುಚ್ಚುತ್ತಿರುವುದರಿಂದ ಭಾರತೀಯ ಸೇನೆಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನ ನಿಲ್ಲಿಸಿ ಬಿಡುತ್ತೇನೆ ಎಂದು ತೆಲಂಗಾಣ ಪೌರಾಡಳಿತ ಸಚಿವ ಕೆ.ಟಿ. ರಾಮ್ ರಾವ್ ಎಚ್ಚರಿಕೆ ಕೊಟ್ಟಿದ್ದಾರೆ. ಭಾರತೀಯ ಸೇನೆ ಕಾರಣವೇ ಇಲ್ಲದೇ ಸಾರ್ವಜನಿಕ ರಸ್ತೆಗಳನ್ನ ಮುಚ್ಚುತ್ತಿದೆ. ಇದರಿಂದ ದಂಡ ಪ್ರದೇಶದ ಬಳಿ ಇರೋ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಇದು ಹೀಗೆ ಮುಂದುವರೆದರೆ ಸೇನೆಗೆ ಪೂರೈಕೆ ಆಗೋ ನೀರು ಮತ್ತು ವಿದ್ಯುತ್ ನಿಲ್ಲಿಸುವುದಾಗಿಯೇ ಹೇಳಿದ್ದಾರೆ. ಸೇನೆಯು ನಾಲೆಯೊಂದರ ಮೇಲೆ ಚೆಕ್‌ಡ್ಯಾಮ್ ನಿರ್ಮಿಸಲು ಸೇನಾಧಿಕಾರಿಗಳು ನಿರ್ಧರಿಸಿದ್ದಾರೆ. ಇದರಿಂದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಹಾಗಾಗಿ ಅವರು ಈಗಾಗಲೇ ಆತಂಕದಲ್ಲಿದ್ದಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!