ವಿಶ್ವದ ಅತ್ಯಂತ ಸಂತೋಷಭರಿತ ರಾಷ್ಟಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಬೆಂಗಳೂರು : ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಫಿನ್ಲೆಂಡ್ ಸತತ ಐದನೇ ಬಾರಿಗೆ ಮೊದಲನೇ ಸ್ಥಾನ ದಕ್ಕಿಸಿಕೊಂಡಿದೆ. 146 ರಾಷ್ಟçಗಳ ವಿಶ್ವ ಸಂತೋಷ ಸೂಚ್ಯಂಕದಲ್ಲಿ ಅಫ್ಗಾನಿಸ್ತಾನ ಅತ್ಯಂತ ಅತೃಪ್ತಿಕರ ರಾಷ್ಟವೆಂಬ ಹಣೆಪಟ್ಟಿ ಹೊತ್ತಿದೆ. ವಿಶ್ವ ಸಂತೋಷದಾದಾಯಕ ದೇಶಗಳ ವರದಿಯು ಕಳೆದ ಹತ್ತು ವರ್ಷಗಳಿಂದ ಪ್ರಕಟವಾಗುತ್ತಿದೆ. ಜನರ ಸಂತೋಷದ ಮೌಲ್ಯಮಾಪನ, ಆರ್ಥಿಕ ಮತ್ತು ಸಾಮಾಜಿಕ ಡೇಟಾವನ್ನು ಆಧರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದು ಮೂರು ವರ್ಷಗಳ ಅವಧಿಯಲ್ಲಿ ಸರಾಸರಿ ಡೇಟಾದ ಆಧಾರದ ಮೇಲೆ ಸೊನ್ನೆಯಿಂದ 10ರ ಸ್ಕೇಲ್‌ನಲ್ಲಿ ಸಂತೋಷದ ಸ್ಕೋರ್ ಅನ್ನು ನಿರ್ಧರಿಸುತ್ತದೆ. ಇತ್ತೀಚಿನ ಆವೃತ್ತಿಯನ್ನು ರಷ್ಯಾ – ಉಕ್ರೇನ್ ಸಂಘರ್ಷಕ್ಕಿತ ಕೊಂಚ ಮುಂಚೆ ಪೂರ್ಣಗೊಳಿಸಲಾಗಿತ್ತು.

ಜನರ ಆದಾಯ, ದೇಶಗಳಲ್ಲಿನ ಭ್ರಷ್ಟಾಚಾರದ ಮಟ್ಟ, ಜನರ ವೈಯಕ್ತಿಕ ಸ್ವಾತಂತ್ರ‍್ಯ ಹಾಗೂ ಆರೋಗ್ಯದ ಗುಣಮಟ್ಟ, ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಮೊದಲಾದ ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಫಿನ್ಲೆಂಡ್ ಮೊದಲ ಸ್ಥಾನ ಅಲಂಕರಿಸಿದ್ದರೆ, ನಂತರದ ಸ್ಥಾನದಲ್ಲಿ ಡೆನ್ಮಾರ್ಕ್ ಇದ್ದು, ನಂತರದಲ್ಲಿ ಐಸ್‌ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ನೆದರ್ಲೆಂಡ್ ದೇಶಗಳು ಸ್ಥಾನ ಪಡೆದಿವೆ. ಅಮೆರಿಕ 16ನೇ ಸ್ಥಾನಕ್ಕೇರಿದ್ದು, 17ನೇ ಸ್ಥಾನದಲ್ಲಿ ಬ್ರಿಟನ್ ಹಾಗೂ ಫ್ರಾನ್ಸ್ 20ನೇ ಸ್ಥಾನದಲ್ಲಿದೆ. ತಾಲೀಬಾನಿ ಗಳ ಆಡಳಿತ, ಮಾನವೀಯ ಬಿಕ್ಕಟ್ಟು, ಯುದ್ಧ ಆಘಾತಗಳನ್ನೆದುರಿಸುತ್ತಿರುವ ಅಫ್ಘಾನಿಸ್ತಾನ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ. ಲೆಬನಾನ್ ಕಡೆಯಿಂದ ಎರಡನೇ ಸ್ಥಾನವನ್ನು ಪಡೆದಿದೆ. ಭಾರತ ಈ ವರ್ಷವೂ 136ನೇ ಸ್ಥಾನ ಪಡೆದಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!