ದಾವಣಗೆರೆಯಲ್ಲಿ ನಾಮಪತ್ರ ವಾಪಾಸ್ ಪಡೆವರಾರು?
ದಾವಣಗೆರೆ: ಜಗಳೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಸ್.ವಿ. ರಾಮಚಂದ್ರ ಅವರ ಪತ್ನಿ ಇಂದಿರಾ ಎಸ್.ಆರ್. ನಾಮಪತ್ರ ಹಿಂಪಡೆದಿದ್ದಾರೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ, ಶ್ರೀಕಾಂತ ಎಂ.ಕಾಕಿ, ನಾಗರಾರ್ಜುನ ಜಿ.ಆರ್., ಕೆ.ಜಿ.ಅಜ್ಜಪ್ಪ. ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರರಾಗಿದ್ದ ಮಹಮದ್ ರಿಯಾಜ್ ಸಾಬ್, ಸುಭಾನ್ ಖಾನ್, ಬೀಡಿ ಎಂ ರಾಜಾಸಾಬ್, ಎಂ.ಬಿ.ಪ್ರಕಾಶ್, ಅಫ್ಜಲ್ ಖಾನ್, ಬಿ.ನಾಗೇಶ್ವರರಾವ್, ಬರ್ಕಾತ್ ಅಲಿ, ದಿಲ್ ಜಾನ್ ಖಾನ್ ನಾಮಪತ್ರ ವಾಪಾಸ್ ಪಡೆದಿದ್ದಾರೆ.
ಕುತೂಹಲ ಕೆರಳಿಸಿದ್ದ ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗದ ಆರ್.ಎಲ್. ಶಿವಪ್ರಕಾಶ್ ಹಾಗೂ ಜಿ.ಎಸ್. ಶ್ಯಾಮ್ ನಾಮಪತ್ರ ಹಿಂಪಡೆದಿದ್ದಾರೆ. ಮತ್ತೋರ್ವರಾದ ಶಿವನಂದ ಯಾನೆ ಶಿವಾನಂದ.ಆರ್ ಸಹ ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟಾರೆ ಬಂಡಾಯ ಶಮನಗೊಳಿಸಲು ನಾಯಕರು ಪಟ್ಟಿದ್ದ ಶ್ರಮ ಸಾರ್ಥಕವಾಗಿದೆ.
ಹರಿಹರದಲ್ಲಿ ಪಕ್ಷೇತ್ರ ಅಭ್ಯರ್ಥಿ ಕರಿಬಸಪ್ಪ ಮಠದ ಮಾತ್ರ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷೇತರರಾಗಿದ್ದ ಕೆ.ಶಿವಲಿಂಗಪ್ಪ, ರಂಗನಾಥ ಬಿ, ಚಂದ್ರಪ್ಪ.ವಿ., ಹೊನ್ನಾಳಿಯಲ್ಲಿ ಪಕ್ಷೇತರರಾಗಿದ್ದ ಕಿರಣ.ಎಲ್.ಎಸ್, ಬಿ.ಜಿ.ಶಿವಮೂರ್ತಿ, ರಂಗನಾಥಸ್ವಾಮಿ ಸೇರಿದಂತೆ ಒಟ್ಟು 7 ಕ್ಷೇತ್ರಗಳಿಂದ 22 ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.