ರಾಜ್ಯ ಸುದ್ದಿ

ಅಕ್ರಮ ಮರಳುಗಾರಿಕೆ ಪ್ರಶ್ನಿಸಿದ ಮಹಿಳಾಧಿಕಾರಿ ಎಳೆದಾಟ: 44 ಮಂದಿ ಬಂಧನ

ಅಕ್ರಮ ಮರಳುಗಾರಿಕೆ ಪ್ರಶ್ನಿಸಿದ ಮಹಿಳಾಧಿಕಾರಿ ಎಳೆದಾಟ: 44 ಮಂದಿ ಬಂಧನ

ಪಾಟ್ನಾ: ಅಕ್ರಮ ಮರಳು ದಂಧೆ ಕಾರ್ಯಾಚರಣೆಗೆ ತೆರಳಿದ್ದ ಗಣಿ ಇಲಾಖೆಯ ಮಹಿಳಾ ಇನ್‌ಸ್ಪೆಕ್ಟರ್‌ರೊಬ್ಬರನ್ನು ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ಪಾಟ್ನಾ ಜಿಲ್ಲೆಯ ಬಿಹ್ತಾ ಪಟ್ಟಣದಲ್ಲಿ ನಡೆದಿದೆ.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕಿಡಿಗೇಡಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗಣಿ ಇಲಾಖೆಯ ಇನ್ಸ್‌ಪೆಕ್ಟರ್ ಅಮ್ಯಾ ಕುಮಾರಿ, ಇಲಾಖಾಧಿಕಾರಿ ಕುಮಾರ್ ಗೌರವ್ ಮತ್ತು ನಿರೀಕ್ಷಕ ಸೈಯದ್ ಫರ್ಹೀನ್ ಸೇರಿದಂತೆ ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮ್ಯಾ ಕುಮಾರಿ ಅವರನ್ನು ಪುರುಷರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಸ್ಥಳದಿಂದ ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಕೈ ಹಿಡಿದು ಎಳೆದಾಡಿ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಅಕ್ರಮ ಮರಳುಗಾರಿಕೆ ಪ್ರಶ್ನಿಸಿದ ಮಹಿಳಾಧಿಕಾರಿ ಎಳೆದಾಟ: 44 ಮಂದಿ ಬಂಧನ

ಗಣಿ ಇಲಾಖೆ ಅಧಿಕಾರಿಗಳ ತಂಡವೊಂದು ಟ್ರಕ್‌ಗಳ ಓವರ್‌ಲೋಡ್ ಮತ್ತು ಅಕ್ರಮ ಮರಳುಗಾರಿಕೆಯನ್ನು ಪರಿಶೀಲಿಸಲು ಬಿಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಪರೇವ್ ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಅಧಿಕಾರಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಜತೆಗೆ, ಟ್ರಕ್‌ನಿಂದ ಡಿಕ್ಕಿ ಹೊಡೆಯಲು ಯತ್ನಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ 3 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 50 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ 44 ಮಂದಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಾಜೀವ್ ಮಿಶ್ರಾ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!