ವಾಗೀಶ್ ಸ್ವಾಮಿ ಬಳಗದಿಂದ ತ್ಯಾವಣಿಗೆಯಲ್ಲಿ ಮಾರ್ಚ್ 18 ರಂದು ಮಹಿಳಾ ಸಮಾವೇಶ, ನಗೆ ಹಬ್ಬ
ದಾವಣಗೆರೆ : ವಾಗೀಶ ಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಮಾವೇಶ ಮತ್ತು ಬೃಹತ್ ನಗೆಹಬ್ಬ ಕಾರ್ಯಕ್ರಮವನ್ನು ಮಾ.೧೮ರ ಇಂದು ಸಂಜೆ ೪ ಗಂಟೆಗೆ ತ್ಯಾವಣಿಗೆ ಗ್ರಾಮದ ನೀರಾವರಿ ಇಲಾಖೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೀಚಿ ಎಂದೇ ಖ್ಯಾತರಾದ ಗಂಗಾವತಿ ಪ್ರಾಣೇಶ್, ಪ್ರೋ ಕೃಷ್ಣಗೌಡ ನರಸಿಂಹ ಜೋಶಿ, ಬಸವರಾಜ್ ಮಾಮನಿ, ಇಂದುಮತಿ ಸಾಲಿಮರ್ ಮತ್ತು ತಂಡದವರು ಭಾಗವಹಿಸಲಿದ್ದಾರೆ ಎಂದು ಬಿ.ಎಂ. ವಾಗೀಶ ಸ್ವಾಮಿ ಅಭಿಮಾನಿಗಳ ಬಳಗ ತಿಳಿಸಿದೆ.