ಮಹಿಳಾ ಶಕ್ತಿ ದೇಶದ ಶಕ್ತಿ
ದಾವಣಗೆರೆ: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಜೊತೆ ಸಾಮಾನ್ಯ ವ್ಯಕ್ತಿಯಂತೆ ಕಾರ್ಮಿಕರ ಜೊತೆ ಬೆರೆಯುತ್ತಿರುವ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ಮೇಡಂ ಎಂದು ಸಾಗರ್ ಎಲ್ ಎಂ ಹೆಚ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದಿಂದ ಪೌರಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪೌರಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಮಾಡುವುದರ ಜೊತೆಗೆ ದಾವಣಗೆರೆ ಮಹಾನಗರ ಪಾಲಿಕೆ ಪೂಜ್ಯ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಅಧಿಕಾರವಹಿಸಿಕೊಂಡು ಕೆಲವೇ ದಿನಗಳಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕಾರ್ಮಿಕರ ಜೊತೆ ಬೆರೆತಿದ್ದಾರೆ.
ಕಾರ್ಮಿಕರ ಕುಂದು ಕೊರತೆಗಳನ್ನು ಕಾರ್ಮಿಕರ ಜೊತೆ ಸಮನಾಗಿ ಉನ್ನತ ಅಧಿಕಾರಿಯಾಗಿದ್ದರೂ ಸಹ ಕಾರ್ಮಿಕರ ಜೊತೆ ಸರಿಸಮನಾಗಿ ಕೂತು ಕಾರ್ಮಿಕರ ಯೋಗ ಕ್ಷೇಮವನ್ನು ವಿಚಾರಿಸುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಅಧಿಕಾರ ಶಾಶ್ವತವಲ್ಲ ಮಾನವೀಯತೆ ದೊಡ್ಡದು ಎಂದು ಸಾರುತ್ತಿರುವ ಮಹಾನಗರ ಪಾಲಿಕೆ ಆಯುಕ್ತರು ಎಂದಿದ್ದಾರೆ.