ರಂಗ ಅನಿಕೇತನದಿಂದ ವಿಶ್ವ ರಂಗಭೂಮಿ ದಿನಾಚರಣೆ
![](https://garudavoice.com/wp-content/uploads/2022/03/Rangaboomi-1024x408.jpg)
ದಾವಣಗೆರೆ: ರಂಗ ಅನಿಕೇತನ ದಾವಣಗೆರೆ ತಂಡದಿಂದ ಈಚೆಗೆ ಐ.ಟಿ.ಒ.ಟಿ ಆವರಣದಲ್ಲಿ ವಿಶ್ವ ರಂಗಭೂಮಿ ದಿನ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ರಂಗಾಸಕ್ತರಾದ ವಿನಾಯಕ್, ಅಭಿಷೇಕ್ ವಹಿಸಿದ್ದರು. ನೀನಾಸಂ ಕಲ್ಲೇಶ್ ಪ್ರಾಸ್ತಾವಿಕ ನುಡಿದರು, ಶಶಿಧರ್ ಬಿ.ದುರ್ಗ ಸ್ವಾಗತಿಸಿದರು.ಪೀಟರ್ ಸೆಲ್ಲರ್, ತಂಡದ ಅಧ್ಯಕ್ಷರಾದ, ಹೆಚ್.ಎನ್. ಸುಧಾ, ಕಾರ್ಯದರ್ಶಿ ಪ್ರತಿಭಾ ಬಳ್ಳಿಗಾವಿ, ಶಶಿಧರ್, ಕಲ್ಲೇಶ್, ವಿನಾಯಕ, ಡಾ.ಸೀಮಾ ಸೇರಿದಂತೆ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು.