“ಹುಬ್ಬಳ್ಳಿಯಲ್ಲಿ ನಡೆಸುತ್ತಿರುವುದು ಯುವಜನೋತ್ಸವ ಅಲ್ಲ ಯುವ ವಿನಾಶೋತ್ಸವ”..!: ಸಿದ್ದರಾಮಯ್ಯ

ಹುಬ್ಬಳ್ಳಿ :ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜಯಂತಿಯ ನಿಮಿತ್ತ ಹುಬ್ಬಳ್ಳಿಗೆ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನಲೆ ಹುಬ್ಬಳ್ಳಿ ಶೃಂಗಾರಗೊಂಡಿದೆ. ಏತನ್ಮದ್ಯೆ ಮೋದಿಯವರ ಆಗಮನ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಸುತ್ತಿರುವುದು ಯುವ ಜನೋತ್ಸವ ಅಲ್ಲ ಬದಲಿಗೆ ಯುವ ವಿನಾಶೋತ್ಸವ ಮಾಡುತ್ತಿದ್ದಾರೆ . ಪ್ರಧಾನಿಯವರು ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಪದೆ ಪದೇ ಬರುತ್ತಿದ್ದಾರೋ ಗೊತ್ತಿಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಭವಿಷ್ಯ ಹಾಳುಮಾಡುತ್ತಿದ್ದಾರೆ . ನಿರುದ್ಯೋಗ ಸಮಸ್ಯೆ ಉಂಟಾಗಿದೆ . ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕೆಂದರೆ ವಿದ್ಯಾರ್ಹತೆ ಒಂದೆ ಬೇಕಾಗಿಲ್ಲ. ಅದರ ಜೊತೆಗೆ ಆರ್ಥಿಕವಾಗಿ ಸದೃಡರಾಗಿರಬೇಕು ಏಕೆಂದರೆ ಉದ್ಯೋಗ ಪಡೆದುಕೊಳ್ಳಲು ಲಂಚ ಕೊಡಬೇಕು ಆಡಳಿತದ ನಾಯಕರಿಗೆ . ಹೀಗೆ ಒಂದಲ್ಲ ಎರಡಲ್ಲ ಯಾವುದೆ ಯೋಜನೆ ಸಾರ್ವಜನಿಕರು ಪಡೆದುಕೊಳ್ಳಬೇಕೆಂದರೆ ಕಮಿಷನ್ ಕೊಡಲೇಬೇಕು ಇಷ್ಟೆಲ್ಲಾ ಸಮಸ್ಯೆ ಗಳು ಇದ್ದರೂ ಯುವ ಜನೋತ್ಸವ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ ನಿಜಕ್ಕೂ ಇದು ಯುವ ವಿನಾಶೋತ್ಸವ ಎಂದು ವ್ಯಂಗ್ಯವಾಡಿದ್ದಾರೆ.