ಯುವಜನ ಸಮಿತಿ ಸಭೆ; ಧರ್ಮ ಜಾತಿ ಎಂಬ ದ್ವೇಷ ಬಿಟ್ಟು, ವಿಶ್ವಮಾನವರಾಗಬೇಕು – ಎಸ್ಪಿ ಉಮಾ ಪ್ರಶಾಂತ್

ದಾವಣಗೆರೆ: ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಬಾಂಗಣದಲ್ಲಿ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಅಧ್ಯಕ್ಷತೆಯಲ್ಲಿ ಯುವಜನ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಹಾಜರಿದ್ದ ಠಾಣಾ ಮಟ್ಟದ ಯುವ ಸಮಿತಿ ಸದಸ್ಯರುಗಳು ಮಾತನಾಡಿ ತಮ್ಮ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಂಡರು

ಗಾಂಧಿ ನಗರದ ಸುರೇಶ್ ರವರು ಮಾತನಾಡಿ: ಇತ್ತೀಚಿನ ದಿನಗಳಲ್ಲಿ ಆದ ಗಲಾಟೆಯು ಭಾವುಟದಿಂದ ಪ್ರಾರಂಬವಾಗಿದ್ದು ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಈ ರೀತಿ ಮಾಡುವುದು ಸಮಾಜದ ಶಾಂತಿಯನ್ನು ಕದಡಿದಂತಾಗುತ್ತದೆ ಎಂದು ಹೇಳಿದರು.

* ಮಾರುತಿ ಎಂಬುವವರು ಮಾತನಾಡಿ: ಯಾವುದೇ ಗಲಾಟೆ ಆದರೆ ಮೊದಲು ಕಲ್ಲನ್ನು ಹೊಡಿಬಾರದು ಮೊದಲು ನಾವು ಭಾರತೀಯವರು, ಯಾರಾದರೂ ನ್ಯೂಸೆನ್ಸ್ ಮಾಡಿದರೆ ಅಂತಹವರನ್ನು ಪೊಲೀಸ್‌ರವರಿಗೆ ಹಿಡಿದುಕೊಡಿ ನಾವೆಲ್ಲರೂ ಭಾರತೀಯರಾಗಿ ಇರಬೇಕು ಎಂದು ಹೇಳಿದರು.


* ಶಿವಪ್ರಕಾಶ್, ಕಾರ್ಪೋರೇಟ್ & ಯುವ ಮೋರ್ಚಾ ಅಧ್ಯಕ್ಷ ರವರು ಮಾತನಾಡಿ: ಆರೆಸ್ಟ್ ಆದಾಗ ಎಂಪಿ/ಎAಎಲ್‌ಎ ಮಕ್ಕಳುಗಳು ಅಲ್ಲ ಅದರಲ್ಲಿ ನಮ್ಮ ಬಡವರ ಮಕ್ಕಳು ಮಾತ್ರ ಅರೆಸ್ಟ್ ಆಗಿರೊದು ಅವರಲ್ಲಿ 18-20 ವರ್ಷದ ಯುವಕರು, ಪ್ರಚೋದನೆಗೆ ಒಳಗಾಗಿ ಅಂತಹ ಕೆಲಸ ಮಾಡಬಾರದು, ಬಡವರ ಮಕ್ಕಳು ಹಾಳಾಗುವುದು ದುಡಿಮೆ ಮಾಡೋದು ಮೊದಲ ಕಾರ್ಯ ಆಗಿರಬೇಕು, ಮೊನ್ನೆ ನಡೆದ ಗಲಾಟೆಯಲ್ಲಿ ಅರೆಸ್ಟ್ ಆದ ಯುವಕರ ತಂದೆ-ತಾಯಿಗಳ ಗೊಳೆ ಅಂತ ಅಳುತ್ತಿದ್ದಾರೆ ನಾವುಗಳು ಮನಗೆ ಮೊದಲು ಮಗ, ನಂತರ ಸಮಾಜಕ್ಕೆ ಎಂದು ಹೇಳಿದರು.

* ಶಂಕರ್ ರವರು ಮಾತನಾಡಿ: ಗಲಾಟೆ ಆದಾಗ ಬರಿ ಅರ್ಧ ಗಂಟೆಯಲ್ಲಿ ಎಸ್.ಪಿ. ಮೇಡಂ ಮತ್ತು ಸಿಬ್ಬಂದಿಯವರುಗಳು ಬಂದು ಗಲಾಟೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿರುತ್ತಾರೆ. ಯಾರದೋ ಕಾರಣಕ್ಕೆ ನಾವು ದೊಡ್ಡವರ ಮಾತನ್ನು ಕೇಳದೇ ಹೋದರೆ ನಾವುಗಳು ಸುಮ್ಮನೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ನಾವುಗಳು ಮೊದಲು ದುಡಿದು ನಮ್ಮ ಕುಟುಂಬವನ್ನು ನೋಡಿಕೊಳ್ಳಬೇಕು, ಅದನ್ನು ಬಿಟ್ಟು ಈ ರೀತಿಯ ಗಲಾಟೆಯಲ್ಲಿ ತೊಡಗಿದರೆ 1992 ರಲ್ಲಿ ಆದಂತೆ ಊರನ್ನು ಬಿಡಬೇಕಾಗುತ್ತದೆ. ಹೀಗೆ ಯುವಜನ ಸಮಿತಿಯಲ್ಲಿರುವ ಯುವಕರು ಮಾತನಾಡಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊAಡರು.


*ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಅಧೀಕ್ಷಕರವರು ಸಭೆಯನ್ನುದ್ದೇಶಿಸಿ ಮಾತನಾಡಿ* – ಈ ದಿವಸ ಈ ಸಭೆಯ ಉದ್ದೇಶ ದಿನಾಂಕ:19.09.2024 ರಂದು ನಡೆದ ಘಟನೆ ಕುರಿತು ಯುವ ಸಮೂಹದೊಂದಿಗೆ ಸಭೆ ಹಮಿಕೊಂಡಿದ್ದು, ಮೊನ್ನೆ ನಡೆದ ಘಟನೆಯು ಯುವಜನರಿಂದ ಆದ ಘಟನೆ, ಅವರುಗಳು ಈ ಸಭೆಯಲ್ಲಿ ಭಾರದಿದ್ದರೂ ಸಹ ಅವರ ಪ್ರತಿನಿದಿ ಮತ್ತು ಸ್ನೇಹಿತರಾಗಿ ಅಂತಹವರಿಗೆ ಒಂದು ಸಂದೇಶವನ್ನು ನೀಡಿ. ಗಲಾಟೆಯನ್ನು ಯಾರೋ ಮಾಡಿ ಶಿಕ್ಷೆ ಯಾರೋ ಅನುಭವಿಸುವರೇ ಬೇರೆ, ಕಲ್ಲು ಹೊಡೆಯುವುದು ತಪ್ಪು ಎಂದು ಎಲ್ಲರಿಗೂ ಗೊತ್ತು ಆದರೂ ಸಹ ಕಲ್ಲನ್ನು ಹೊಡೆದಿದ್ದಾರೆ.

ಈ ರೀತಿ ಆಗಬಾರದು. ಸ್ವಾಮಿ ವಿವೇಕನಂದರು ಹೇಳಿದ ಹಾಗೆ ಯುವಜನರು ಮನಸ್ಸು ಮಾಡಿದರೆ ಉತ್ತಮ ಸಮಾಜವನ್ನು ನಿರ್ಮಿಸಬಹುದು. ಉತ್ತಮ ಯುವಜನತೆ ಒಂದು ದೇಶದ ಆಸ್ತಿ ಆಗಿರುತ್ತದೆ. ಈ ರೀತಿಯ ಗಲಾಟೆಯನ್ನು ಯಾರೇ ಮಾಡಿದರೂ ಅವರಿಗೆ ಯಾವುದೇ ರೀತಿಯ ವಿನಾಯಿತಿ ತೋರುವುದಿಲ್ಲ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಯಾರೇ ಪ್ರಚೊದನೆ ಮಾಡಿದರೂ ಸಹ ಅವರಿಂದ ಪ್ರೇರಿಪಿತವಾಗಬಾರದು. ಸಿಸಿಟಿವಿ ದೃಶ್ಯಾವಳಿಗಳನ್ನು ಆಲಿಸಿದಾಗ ಅದರಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಘಟನೆಯಲ್ಲಿ ಭಾಗಿಯಾಗಿದ್ದು, ಇವರು ಪ್ರಚೋದನೆಗೆ ಒಳಗಾಗಿ ಈ ರೀತಿ ಮಾಡಿರುತ್ತಾರೆ. ಇಲ್ಲಿರುವ ಯುವಕರು ಯಾರು ಇದನ್ನು ಗಂಭಿರವಾಗಿ ತಗೆದುಕೊಳ್ಳುತ್ತಾರೋ ಗೊತ್ತಿಲ್ಲ, ಎಲ್ಲ ಬದಲಾವಣೆ ನಿಮ್ಮ ಕೈಯಲ್ಲಿದೆ, ಒಳ್ಳೆಯ ಶಿಕ್ಷಣ ಪಡೆದುಕೊಳ್ಳಿ, ಸ್ವಂತ ಉದ್ಯೋಗವನ್ನು ಮಾಡಿ ನೀವು ಬದಲಾಗಿ ಸಮಾಜ ಬದಲಾಗುತ್ತದೆ, ಅದರಿಂದ ಒಂದು ಅರ್ಥ ಸಿಗುತ್ತದೆ.

ಧರ್ಮ ಜಾತಿ ಎಂಬ ದ್ವೇಷ ಬೇಡ ವಿಶ್ವಮಾನವರಾಗಬೇಕು ನಮ್ಮ ಜಾತಿ ನಮ್ಮ ಕುಲವನ್ನು ಪ್ರೀತಿಸಬೇಕು ಅನ್ಯ ಧರ್ಮಕ್ಕೆ ಯಾವುದೇ ರೀತಿಯಿಂದ ದಕ್ಕೆ ಉಂಟು ಮಾಡಬಾರದು. ಏನಾದರು ಘಟನೆಗಳು ನಡೆದಾಗ ಕೂಡಲೇ ಪೊಲೀಸ್ ಠಾಣೆಗೆ ಕರೆಮಾಡಿ, 112ಗೆ ಕರೆಮಾಡಿ, ಸಂಬAಧಪಟ್ಟ ಪಿಐ/ಪಿಎಸ್‌ಐ ರವರುಗಳಿಗೆ ಕರೆ ಮಾಡಿ ಗಟನೆಗಳು ನಡೆಯದಂತೆ ತಡೆಗಟ್ಟಬೇಕು. ಯುವಜನ ಸಮಿತಿಗೆ ಯಾರು ಸೇರಿಕೊಂಡಿಲ್ಲ, ಸೇರಲು ಬಯಸುವವರು ಸೇರಿಕೊಳ್ಳಿ, ಹಾಗು ಪ್ರತಿ ಮೊಹಲ್ಲಾ, ಗ್ರಾಮ, ಬೀದಿಗಳಲ್ಲಿ ಯುವಜನ ಸಮಿತಿ ಸಭೆಯನ್ನು ಮಾಡಲಾಗುವುದು.

ದಾವಣಗೆರ ನಗರವು ಶಾಂತಿಪ್ರಿಯವಾಗಿದ್ದು, ಆದೊಷ್ಟು ಉಳಿಸಿಕೊಳ್ಳಿ, ಯುವಜನ ಸಮಿತಿ ಸದಸ್ಯರು ಏನಾದರು ಮಾಹಿತಿ ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ, ಅಮಾಯಕರನ್ನು ನಾವು ಬಂಧಿಸಿಲ್ಲ, ಮೊನ್ನೆ ಆಗಿದ್ದ ಗಲಾಟೆ ಮುಗಿದು ಹೋಗಿದೆ, ಮುಂದೆ ಯಾವುದೇ ರೀತಿಯ ಗಲಾಟೆ ಆಗದಂತೆ ನೋಡಿಕೊಳ್ಳಬೇಕು. ಯಾವುದೇ ಧರ್ಮದಲ್ಲಿ ಕಲ್ಲನ್ನು ಹೊಡೆಯುವುದಾಗಲಿ ಅಥವಾ ಯಾವುದೇ ಧರ್ಮದ ಬಗ್ಗೆ ಅಪ ಪ್ರಚೋಚಧನೆ ಮಾಡುವುದಾಗಲಿ ಹೇಳುವುದಿಲ್ಲ. ಯಾವುದೇ ಗಲಾಟೆ/ ಗುಂಪು ಘರ್ಷಣೆಯಂತಹ ಪ್ರಕರಣಗಳು ನಡೆದಾಗ ನಾವು ಅಮಾಯಕರ ಮೇಲೆ ಪ್ರಕರಣ ದಾಖಲಿಸುತ್ತಿರುವುದಿಲ್ಲಾ, ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿಯೇ ಕೃತ್ಯದಲ್ಲಿ ಭಾಗಿಯಾದವರನ್ನು ಗುರುತಿಸಿ ಕೇಸು ಹಾಕಿರುತ್ತೇವೆ.

ಇತ್ತೀಚಿಗೆ ಸಾರ್ವಜನಿಕರು ಸೈಬರ್ ಪ್ರಕರಣಗಳಿಗೆ ಒಳಗಾಗುತ್ತಿದ್ದು ಹೆಚ್ಚು ಜಾಗರೂಕತೆ ವಹಿಸಬೇಕು. ಇವತ್ತಿನ ದಿನಗಳಲ್ಲಿ ಎಲ್ಲರ ಬಳಿಯು ಮೊಬೈಲ್‌ಗಳಿದ್ದು ಯಾವುದೇ ಆನಾಮಧೇಯ/ಅನುಮಾನಸ್ಪದ ಲಿಂಕ್/ಮಸೇಜ್‌ಗಳು ಬಂದರೆ ಅವುಗಳನ್ನು ತೆರೆಯಬೇಡಿ ಇದರಿಂದ ವಂಚನೆಗೊಳಗಾಗುತ್ತೀರಿ. ಮಾದಕ ವಸ್ತು ಸೇವನೆ, ಗಲಾಟೆ/ಅಪರಾಧದಂತಹ ಚಟುವಟಿಕೆಗಳಲ್ಲಿ ಯುವಕರೇ ಹೆಚ್ಚು ಭಾಗಿಯಾಗುತ್ತಿರುವುದರಿಂದ ಯುವಜನ ಸಮಿತಿ ರಚನೆ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ದ್ವೇಷ, ಭಾವನೆಗಳಿಗೆ ದಕ್ಕೆ ತರುವಂತಹ ಹಾಗೂ ಪ್ರಚೋದನಕಾರಿ ದೃಶ್ಯ /ಚಿತ್ರ / ವೀಡಿಯೋ ಪೋಸ್ಟ್ ಹಾಕಬೇಡಿ.ಸಾಮಾಜಿಕ ಜಾಲತಾಣಗಳನ್ನು ಕೋಮು ಭಾವನೆಗೆ ದಕ್ಕೆ ಉಂಟುಮಾಡುವ ರೀತಿಯನ್ನು ಮೆಸೇಜ್‌ಗಳನ್ನು ಅರಿಬಿಡುತ್ತಾರೆ, ಸಮಾಜದಲ್ಲಿ ಯಾವುದೇ ಭಾವನೆಗೆ ದಕ್ಕೆ ಬರದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕರಾದ ಶ್ರೀ ಲಕ್ಷ್ಮಣ್ ನಾಯ್ಕ್ ರವರು ಸಭೆಯ ಪ್ರಸ್ತಾವಿಕ ನುಡಿಗಳನ್ನು ಆಡಿದರು. ವಂಧನರ‍್ಪಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ ರವರು ನಡೆಸಿಕೊಟ್ಟರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ ರವರು & ಶ್ರೀ ಮಂಜುನಾಥ ಜಿ, ನಗರ ಡಿವೈಎಸ್ಪಿ ಶ್ರೀ ಮಲ್ಲೇಶ್ ದೊಡ್ಮನಿ ರವರು, ಪೊಲೀಸ್ ನಿರೀಕ್ಷಕರುಗಳಾದ ಶ್ರೀ ಲಕ್ಷ್ಮಣ್ ನಾಯ್ಕ್, ಗುರುಬಸವರಾಜ್, ಸುನೀಲ್ ಕುಮಾರ್, ಶ್ರೀಮತಿ ಪ್ರಭಾವತಿ, ಶ್ರೀಮತಿ ಮಲ್ಲಮ್ಮ ಚೌಬೆ, ಅಶ್ವಿನ್ ಕುಮಾರ್ ರವರು ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!