ಭಗತ್ ಸಿಂಗ್ ಪುತ್ಥಳಿಗೆ ಸೂಕ್ತ ರಕ್ಷಣೆ ನೀಡಲು ಯುವ ಕಾಂಗ್ರೆಸ್ ಆಗ್ರಹ

ದಾವಣಗೆರೆ : ಮಹಾನಗರ ಪಾಲಿಕೆ ಹಾಗೂ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸ್ಥಳಾಂತರಿಸಿರುವ ದೇಶದ ಅಪ್ರತಿಮ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ರವರ ಪುತ್ಥಳಿಗೆ ಸೂಕ್ತ ರಕ್ಷಣೆ ಒದಗಿಸಿ ಗೌರವ ಸೂಚಿಸುವಂತೆ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿಖಿಲ್ ಕೊಂಡಜ್ಜಿ ಆಗ್ರಹಿಸಿದ್ದಾರೆ. ಇಂದು ಹುತಾತ್ಮ ದಿನದ ಅಂಗವಾಗಿ ಭಗತ್ ಸಿಂಗ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಮಹಾನಗರಪಾಲಿಕೆ ಆಯುಕ್ತರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು.

ಇದೆ ಸಂಧರ್ಭದಲ್ಲಿ ಮಾತನಾಡಿದ ನಿಖಿಲ್ ಕೊಂಡಜ್ಜಿ ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ,ಅನೇಕ ಯುವಕರನ್ನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಿಪಿಸಿದ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ವೀರ ಸ್ವಾತಂತ್ತ್ರ್ಯ ಹೋರಾಟಗಾರ ಭಗತ್ ಸಿಂಗ್ ರವರ ಪುತ್ಥಳಿಗೆ ಯಾವುದೇ ಸೂಕ್ತ ರಕ್ಷಣೆಯಿಲ್ಲದೆ ಅನಾಥವನ್ನಾಗಿ ಮಾಡಲಾಗಿದೆ. ಎರಡು ಬಸ್ ನಿಲ್ದಾಣಗಳ ಮಧ್ಯೆ ಮೂರ್ತಿ ಸ್ಥಾಪಿಸಲಾಗಿದ್ದು ಅಲ್ಲಿ ಬರುವ ಜನರು ಯಾವುದೇ ಸ್ವಚ್ಚತೆ ಕಾಪಾಡದೇ ಭಗತ್ ಸಿಂಗ್ ರವರಿಗೆ ಅವಮಾನ ಮಾಡಲಾಗಿದೆ. ಕೂಡಲೇ ವೀರ ಕ್ರಾಂತಿಕಾರಿ ಭಗತ್ ಸಿಂಗ್ ರವರ ಮೂರ್ತಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಮಂಜುನಾಥ್ ಗಡಿಗುಡಾಳ್ ಮಾತನಾಡಿ ಸ್ಮಾರ್ಟ್ ಸಿಟಿಯ ಅಭಿವೃದ್ಧಿ ಹೆಸರಿನಲ್ಲಿ ಈ ಮುಂಚೆ ಇದ್ದ ಸ್ಥಳದಿಂದ ಬೇರೆ ಕಡೆ ಭಗತ್ ಸಿಂಗ್ ರವರ ಪುತ್ಥಳಿ ಸ್ಥಳಾಂತರಿಸಿದ್ದು ಖಂಡನೀಯವಾಗಿದೆ ಅಲ್ಲಿ ಯಾವುದೇ ಸೂಕ್ತ ರಕ್ಷಣೆಯಿಲ್ಲ,ಸ್ವಚ್ಚತೆಯಿಲ್ಲ,ಕೇವಲ ಹೆಸರಿಗಷ್ಟೇ ದೇಶಭಕ್ತರು ಎನ್ನುವ ಬಿಜಿಪಿಯವರಿಗೆ ಈ ಅವಮಾನ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ವಾತಂತ್ರ್ಯ ಹೋರಾಟಗಾರನಿಗೆ ಆಗಿರುವ ಅನ್ಯಾವವನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ವಿಪಕ್ಷ ನಾಯಕರಾದ ಎ. ನಾಗರಾಜ್,ಕೆಪಿವೈಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್,ಉತ್ತರ ಬ್ಲಾಕ್ ಅಧ್ಯಕ್ಷರಾದ ಕೆ.ಜಿ.ಶಿವಕುಮಾರ್,ಪಾಲಿಕೆ ಹಿರಿಯ ಸದಸ್ಯರಾದ ಚಮನ್ ಸಾಬ್,ವಿನಾಯಕ ಪೈಲ್ವಾನ್,ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಶಿಲ್ಪಾ ಪರಶುರಾಮ್, ಜಿಲ್ಲಾ ಅಡ್ಮಿನ್ ಮಹಬೂಬ್ ಬಾಷಾ, ಕಾರ್ಯದರ್ಶಿ ಹಾಲೇಶ್, ನವೀನ್, ರಾಕೇಶ್, ನದೀಮ್, ಮಲ್ಲಿ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!