Griha Lakshmi : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ : ಸರ್ವರ್ ಕಂಟಕದೊಂದಿಗೆ ಮಹಿಳಾಮಣಿ ಗಳಿಗೆ ಸ್ವಾಗತ

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ : ಸರ್ವರ್ ಕಂಟಕದೊಂದಿಗೆ ಮಹಿಳಾಮಣಿ ಗಳಿಗೆ ಸ್ವಾಗತ

ದಾವಣಗೆರೆ: ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಎಲ್ಲೆಡೆ ಮಹಿಳಾ ಮಣಿಗಳು ಅರ್ಜಿ ಸಲ್ಲಿಕೆಗೆ ದುಂಬಾಲು ಬಿದ್ದಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಗೆ ಬಿ.ಪಿ.ಎಲ್, ಎ.ಪಿ.ಎಲ್, ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು ಇದರ ಲಾಭವನ್ನು ಪಡೆಯ ಬಹುದಾಗಿದೆ. ಪ್ರತಿ ತಿಂಗಳು ಮನೆಯ ಯಾಜಮಾನಿಗೆ 2 ಸಾವಿರ ರೂ ಪಿಂಚಣಿಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಿದೆ.ಸೇವಾಸಿಂಧು ಪೋರ್ಟಲ್, ಗ್ರಾಮ ಪಂಚಾಯತ್ 1, ಕರ್ನಾಟಕ 1 ಕೇಂದ್ರದ ಮೂಲಕ ಅರ್ಜಿಗಳನ್ನು ಮೊಬೈಲ್ ಅಪ್‌ಗಳಲ್ಲಿ ಸಲ್ಲಿಸಬಹುದಾಗಿದೆ, ಮೊಬೈಲ್ ಸಂಖ್ಯೆಗೆ ಒ.ಟಿ.ಪಿ.ಗಳು ಬರಲಿದ್ದು, ಅದನ್ನು ಅರ್ಜಿಗಳಲ್ಲಿ ಭರ್ತಿ ಮಾಡಬೇಕಾಗುವುದು. ಅರ್ಜಿ ಸಲ್ಲಿಕೆಗೆ ಯಾವೂದೇ ರೀತಿಯ ಶುಲ್ಕಗಳನ್ನು ಪಾವತಿಸುವಂತಿಲ್ಲ ಉಚಿತವಾಗಿ ಅರ್ಜಿಗಳನ್ನು ಸಲ್ಲಿಸ ಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ.

ಅರ್ಜಿ ಸಲ್ಲಿಕೆ ಎಸ್.ಎಂ.ಎಸ್. ಮೂಲಕ ಹಾಗೂ ಸೇವಾ ಸಿಂಧು ಪೋರ್ಟಲ್ ಮೂಲಕ ಆಟೋ ಜನರೇಟರ್ ಸ್ವೀಕೃತಿಯನ್ನು ಪಡೆಯ ಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅರ್ಜಿದಾರನ ಮತ್ತು ಆಕೆಯ ಪತಿಯ ಅಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ವಿವರಗಳು ಅಗತ್ಯವಾಗಿರುತ್ತದೆ. ಮಂಜೂರಾತಿಯ ನಂತರ ಡಿ.ಬಿ.ಟಿ. ಮೂಲಕ ನೇರ ನಗದು ವರ್ಗಾವಣೆ ಮಾಡಲಾಗುವುದು. ಅರ್ಜಿದಾರರು ಅಥಾವ ಆಕೆಯ ಪತಿ ಜಿ.ಎಸ್.ಟಿ ಅಥವಾ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಅವರುಗಳು ಗೃಹ ಲಕ್ಷ್ಮಿ ಯೋಜನೆಗೆ ಅನರ್ಹರಾಗಿರುತ್ತಾರೆ.

ಈ ಯೋಜನೆಗೆ ಸರ್ಕಾರವು ಆಯಾ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಿ.ಓ.ಪಿ ಅಧಿಕಾರಿಗಳನ್ನು ಅನುಮೋದಿತ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇವರು ಪರಿಶೀಲಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ.
ಈ ವಿವರಗಳನ್ನು ದಾಖಲಾತಿಯನ್ನು ನೊಂದಾಯಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್ 1 ಅಥವಾ ಕರ್ನಾಟಕ 1 ಸೇವಾ ಸಿಂಧು ಕೇಂದ್ರಗಳಲ್ಲಿ ಕೇವಲ 10 ರೂ ನೋಂದಣಿಯನ್ನು ಪಡೆಯುತ್ತಾರೆ. ಅದರೆ ಇದೇನು ಸರ್ಕಾರ ನಿಗಧಿ ಪಡೆಸಿರುವ ಶುಲ್ಕವಲ್ಲ.
ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೆ ದಲ್ಲಾಳಿಗಳ ಮೊರೆ ಹೋಗದೆ ನೇರವಾಗಿ ಸೇವಾ ಸಿಂಧುಗಳಲ್ಲಿ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳೊಂದಿಗೆ ಹೋಗಬಹುದಾಗಿದೆ.ಈ ಯೋಜನೆಯ ಫಲಾನುಭವಿಗಳ ಅರ್ಜಿಗಳನ್ನು ಜುಲೈ 15 ರಂದು ಪರಿಷ್ಕರಣಿ ಮಾಡಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಚಾಲನೆ ನೀಡುವ ಸಂಭವವಿದೆ.

Leave a Reply

Your email address will not be published. Required fields are marked *

error: Content is protected !!