ಜಪ್ತಿ ಮಾಡಲಾದ ಅಕ್ಕಿ : ಶುಕ್ರವಾರ ಬಹಿರಂಗ ಹರಾಜು
ದಾವಣಗೆರೆ : ಜಿಲ್ಲೆಯ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಜಿಲ್ಲಾ ಗ್ರಾಮಾಂತರ ಪೋಲೀಸ್ ಠಾಣೆ ಹಾಗೂ ಹದಡಿ ಪೋಲೀಸ್ ಠಾಣೆಯ ಪೋಲೀಸ್ ಉಪ ನಿರೀಕ್ಷಕರು ಜಪ್ತಿ ಮಾಡಲಾದ 41.45 ಕ್ವಿಂಟಾಲ್ ಅಕ್ಕಿಯನ್ನು ಮಾರ್ಚ್ 24 ರಂದು ಬೆ. 10.30 ಕ್ಕೆ ಟಿ.ಎ.ಪಿ.ಸಿ.ಎಂ.ಎಸ್(ಲಿ) ಗ್ರಾಮಾಂತರ ಸಗಟು ಮಳಿಗೆ, ಎ.ಪಿ.ಎಂ.ಸಿ ಯಾರ್ಡ, ಡಿ-ಬ್ಲಾಕ್, ಎ.ಆರ್.ಸಿ ಗೋದಾಮು, ಎ.ಪಿ.ಎಂ.ಸಿ ಸಚೇರಿ ಹಿಂಬಾಗ ಇಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ.
2022 ಫೆಬ್ರವರಿ 27 ರಿಂದ 2023 ಜನವರಿ 24 ರವರೆಗೆ ಹೊಸನಾಯ್ಕನಹಳ್ಳಿ ಕ್ರಾಸ್ ಬಳಿ 7.68 ಕ್ವಿಂಟಾಲ್ ಅಕ್ಕಿ, ಆಲೂರು ಹಟ್ಟಿ ಗಾಮದಲ್ಲಿ 5.58 ಕ್ವಿಂಟಾಲ್ ಅಕ್ಕಿ , ಹೆಚ್ ಕಲ್ಪನಹಳ್ಳಿ ಬಳಿ 9.93 ಕ್ವಿಂಟಾಲ್ ಅಕ್ಕಿ, ಕುರ್ಕಿ ಬಳಿ 11.98 ಕ್ವಿಂಟಾಲ್ ಅಕ್ಕಿ , ಹದಡಿ ಗ್ರಾಮದ ಬಳಿ 6.28 ಕ್ವಿಂಟಾಲ್ ಅಕ್ಕಿ ಒಳಗೊಂಡಂತೆ ಒಟ್ಟು 41.45 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿ ಬಹಿರಂಗ ಹರಾಜು ಮಾಡಲಾಗುವುದು.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ಆಹಾರ ಶಿರಸ್ತೇದಾರ ಮೊ. ಸಂ. 9480065633 ಮತ್ತು ಆಹಾರ ನಿರೀಕ್ಷಕರ ಮೊ. ಸಂ. 7411462337, 8722433298, ಸಂಪರ್ಕಿಸಬಹುದೆಂದು ದಾವಣಗೆರೆ ತಾಲ್ಲೂಕು ತಹಶೀಲ್ದಾರರಾದ ಡಾ. ಎಂ.ಬಿ ಅಶ್ವಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.