ಪದವಿ ಓದುವ ಜೊತೆ ಉತ್ತಮ ಸಂಸ್ಕಾರ ಮುಖ್ಯ – ಪ್ರೊ. ವೆಂಕಟೇಶ್ ಬಾಬು
ದಾವಣಗೆರೆ: ಇಂದಿನ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಓದುವುದರ ಜತೆಗೆ ಉತ್ತಮವಾದ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಜತೆಗೆ ಒಂದಿಷ್ಟು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಆಗ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ ವೆಂಕಟೇಶ್ ಬಾಬು ರವರು ಹೇಳಿದರು.
ಅವರು ಇಂದು ನಗರದ ಬಿಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಓರಿಯೆಂಟೇಶನ್ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಕಾಂ ಬಿಬಿಎ ಬಿಸಿಎ ಪದವಿಗಳು ಕೌಶಲ್ಯ ಗಳ ಪದವಿಯಾಗಿದ್ದು ವಿದ್ಯಾರ್ಥಿಗಳು ತಮ್ಮ ಪದವಿಯ ಜತೆಗೆ ಒಂದಿಷ್ಟು ತಮಗೆ ಗೊತ್ತಿರುವ ಕೌಶಲ್ಯಗಳನ್ನು ತಿಳಿದುಕೊಂಡರೆ ಉದ್ಯೋಗ ಮಾರುಕಟ್ಟೆಯಲ್ಲಿ ಬಹುಬೇಗನೇ ಉತ್ತಮವಾದ ಕೆಲಸವನ್ನು ಪಡೆಯಬಹುದು ಎಂದು ಹೇಳಿದರು .
ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರತಿಭಾವಂತರು ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಅನಾವರಣಗೊಳಿಸುವ ಅವಕಾಶಗಳನ್ನು ಹುಡುಕಿಕೊಳ್ಳಬೇಕು ಅಥವಾ ಅವಕಾಶ ಸಿಕ್ಕಾಗ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಆಗ ಸುಂದರ ಬದುಕು ನಡೆಸುವುದು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು .
ನಿರ್ದಿಷ್ಟ ಗುರಿ ಸತತ ಪ್ರಯತ್ನ ಆತ್ಮವಿಶ್ವಾಸ ಧನಾತ್ಮಕ ಚಿಂತನೆ ಗುರುಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಬೇಕು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಓದುವ ಸಮಯದಲ್ಲಿ ಮೊಬೈಲ್ನನ್ನು ಕಡಿಮೆ ಬಳಸುವುದರ ಕಡೆಗೆ ಚಿಂತಿಸಬೇಕು ಎಂದು ಹೇಳಿದರು .
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವೇ ಕಡಿಮೆ ಆಗಿದೆ. ಪುಸ್ತಕವನ್ನು ಕೊಳ್ಳುವ ಅಥವಾ ಪುಸ್ತಕವನ್ನು ಹಿಡಿದುಕೊಂಡು ಓದುವ ವಿದ್ಯಾರ್ಥಿಗಳನ್ನು ನೋಡುವುದೇ ಆಕಸ್ಮಿಕವಾಗಿ ಹೋಗಿದೆ . ವಿದ್ಯಾರ್ಥಿಗಳು ಪುಸ್ತಕವನ್ನು ಓದುತ್ತಾ ಹೋದರೆ ಸಮಾಜದಲ್ಲಿ ತಲೆಯೆತ್ತಿ ಬಾಳುವಂತೆ ಮಾಡುತ್ತದೆ ಎಂದು ಹೇಳಿದರು .
ಯಾವುದೇ ವ್ಯಕ್ತಿ ಖ್ಯಾತಿ ಪಡೆಯಲು ಓದು ತುಂಬಾ ಮುಖ್ಯ ಅಂಬೇಡ್ಕರ್ ಕಲಾಂ ವಿವೇಕಾನಂದ ಕುವೆಂಪು ವಿಶ್ವೇಶ್ವರಯ್ಯ ಇವರೆಲ್ಲರೂ ತಮ್ಮಲ್ಲಿರುವ ಯಾವುದೇ ಆಸ್ತಿಗಳಿಂದ ಹೆಸರಾದವರಲ್ಲ ಇವರೆಲ್ಲರಿಗೂ ಇಂದಿಗೂ ಸಮಾಜ ಗೌರವ ಕೊಡುತ್ತದೆ ಎಂದರೆ ಅದು ಅವರಲ್ಲಿರುವ ಅಪಾರವಾದ ಜ್ಞಾನ ಸಂಪತ್ತಿಗೆ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದು ಉದಾಹರಣೆ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು .
ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿದಿನ 2ಗಂಟೆಗಳ ಕಾಲ ಪುಸ್ತಕಗಳನ್ನು ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಂಡಾಗ ಪದವಿಯ ಓದು ಹಾಗೂ ವಿದ್ಯಾರ್ಥಿ ಜೀವನ ಬಂಗಾರದ ಜೀವನ ವಾಗುತ್ತದೆ ಎಂದು ತಿಳಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಗುರು ಅವರು ಮಾತನಾಡುತ್ತಾ ಸಂಪನ್ಮೂಲ ವ್ಯಕ್ತಿಗಳು ನೀಡುವ ಪ್ರತಿಯೊಂದು ವಿಷಯಗಳನ್ನು ವಿದ್ಯಾರ್ಥಿಗಳು ಪರಿಗಣಿಸಿ ತಮ್ಮ ಸಾಧನೆ ಮಾಡಲು ಮುಂದಾಗಬೇಕು ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರೇಖಾರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಂತೋಷ್ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರೆ ನಯನ ರವರು ಸ್ವಾಗತಿಸಿದರು ಅಧ್ಯಾಪಕರಾದ ಲೋಲಾಕ್ಷಿ ಅತಿಥಿಗಳನ್ನು ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಗುರು ಅವರು ಮಾತನಾಡುತ್ತಾ ಸಂಪನ್ಮೂಲ ವ್ಯಕ್ತಿಗಳು ನೀಡುವ ಪ್ರತಿಯೊಂದು ವಿಷಯಗಳನ್ನು ವಿದ್ಯಾರ್ಥಿಗಳು ಪರಿಗಣಿಸಿ ತಮ್ಮ ಸಾಧನೆ ಮಾಡಲು ಮುಂದಾಗಬೇಕು ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರೇಖಾರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಂತೋಷ್ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರೆ ನಯನ ರವರು ಸ್ವಾಗತಿಸಿದರು ಅಧ್ಯಾಪಕರಾದ ಲೋಲಾಕ್ಷಿ ಅತಿಥಿಗಳನ್ನು ವಂದಿಸಿದರು .