ಎಚ್.ಮಾರುತೇಶ್‌ಗೆ ಪಿಎಚ್.ಡಿ. ಪದವಿ

ದಾವಣಗೆರೆ: ಚಿತ್ರದುರ್ಗ ಹೊಳಲ್ಕೆರೆ ತಾಲ್ಲೂಕು ಟಿ.ನುಲೇನೂರು ಗ್ರಾಮದ ಎಚ್.ಮಾರುತೇಶ್ ಅವರು ರಸಾಯನಶಾಸ್ತ್ರ ವಿಜ್ಞಾನ ವಿಭಾಗದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.
‘ಸಿಂಥೆಸಿಸ್ ಅಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವಿಟೀಸ್ ಆಫ್ ಸಮ್ ಕ್ವಿನೊಲಿನ್ಸ್ ಡಿರೈವಿಟೀಸ್’ ವಿಷಯವಾಗಿ ಎಚ್.ಮಾರುತೇಶ್ ಅವರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಜ್ಞಾನ ವಿಭಾಗದ ಅಧ್ಯಕ್ಷ ಮತ್ತು ಸಹಪ್ರಾಧ್ಯಾಪಕ ಡಾ.ಬಿ.ಪಿ.ನಂದೀಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.