ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ
ವೈಯಕ್ತಿಕ ಗುರುತಿನ ಚೀಟಿಗಳನ್ನು ಎಷ್ಟೇ ತಿದ್ದುಪಡಿ ಮಾಡಿದರೂ ಒಂದಲ್ಲ ಒಂದು ತಪ್ಪುಗಳು ಇದ್ದೇ ಇರುತ್ತದೆ. ಇದೀಗ ಮತದಾನದ ಗುರುತಿನ ಚೀಟಿಯಲ್ಲಿ ತಿದ್ದುಪಡಿ ಮಾಡಲು ಮತ್ತೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ವೋಟರ್ ಹೆಲ್ಪ್‌ಲೈನ್ ಅಲ್ಪಿಕೇಶನ್ ಮುಖಾಂತರ ಸುಲಭವಾಗಿ ಮಾಡುವ ಅವಕಾಶವಿದೆ.
ಅದಲ್ಲದೆ https://voters.eci.gov.in ವೆಬ್ ಸೈಟ್ ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ ಸಲ್ಲಿಸಬಹುದು, ಇಲ್ಲದಿದ್ದರೆ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಛೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು.
ವಿಳಾಸ ಬದಲಾವಣೆ, ಬದಲಿ ಮತದಾರರ ಗುರುತಿನ ಚೀಟಿ ಪಡೆಯಲು, ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿಗಳಿಗಾಗಿ, ಅಂಗವಿಕಲ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲು ಅವಕಾಶ ನೀಡಲಾಗಿದೆ.
ಇನ್ನೂ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ವಿಶೇಷ ನೋಂದಣಿ ಅಭಿಯಾನ ನಡೆಯಲಿದ್ದು, ಇಲ್ಲಿದೆ ಆ ದಿನಾಂಕಗಳ ವಿವರ ಹೀಗಿದೆ.
- 18-11-2023 (ಶನಿವಾರ)
- 19-11-2023 (ಭಾನುವಾರ)
- 02-12-2023 (ಶನಿವಾರ)
- 03-12-2023 (ಭಾನುವಾರ)
ಸ್ಥಳ : ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ, ಸಮಯ: ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ನಿಮ್ಮ ವಿವರಗಳನ್ನು ಪರಿಶೀಲಿಸಿ ಆನ್‌ಲೈನ್‌ನಲ್ಲಿ ಡಿಜಿಸ್ಟರ್ ಆಗಿ ಚೆಕ್ ಮಾಡಿಕೊಳ್ಳಬಹುದು. ಈ ಮಾಹಿತಿಗಳು https://voterportal.eci.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ.