ತಜ್ಞರೊಂದಿಗೆ ಚರ್ಚಿಸಿದ ನಂತರ 1-5 ನೇ ತರಗತಿ ಪ್ರಾರಂಭದ ಬಗ್ಗೆ ಕ್ರಮ – ಸಿಎಂ ಬಸವರಾಜ್ ಬೊಮ್ಮಾಯಿ

ದಾವಣಗೆರೆ: ಕರೋನಾ ಕಡಿಮೆಯಾಗಿರುವ ಹಿನ್ನೆΥಲೆಯಲ್ಲಿ ಇನ್ನೆರಡು ದಿನದಲ್ಲಿ ತಜ್ಞರ ಜೊತೆ ಚರ್ಚಿಸಿ, ನಿಯಮಾವಳಿ ಸರಳೀಕರಣಕ್ಕೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಹೊನ್ನಾಳಿಯ ಸುರಹೊನ್ನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕು ಇಳಿಮುಖಗೊಂಡಿದ್ದು, ಕೊವಿಡ್ ಸರಾಸರಿ ರಾಜ್ಯದಲ್ಲಿ ಶೇ. 1 ಕ್ಕೆ ಕಡಿಮೆಯಾಗಿದೆ. ಕೊವಿಡ್ ನಿಯಮ ಸರಳೀಕರಣ ಬಗ್ಗೆ ಇನ್ನು ತಜ್ಞರ ಜೊತೆ ಮಾತನಾಡಬೇಕಿದೆ ಎಂದರು.
ತಜ್ಞರೊಂದಿಗೆ ಚರ್ಚಿಸಿದ ನಂತರ 1-5 ನೇ ತರಗತಿ ಪ್ರಾರಂಭದ ಬಗ್ಗೆ ಸಲಹೆ ನಂತರ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು.
ಸಿ ಎಂ ಇಬ್ರಾಯಿಂ ನನ್ನ ಆತ್ಮೀಯ ಸ್ನೇಹಿತರು. ಅವರಿಗೆ ಯಾವಾಗ ಜ್ಞಾನೋದಯ ಆಗೋತ್ತೋ ಅವರಿಗೂ ಗೊತ್ತಿಲ್ಲ. ಅವರ ಜೊತೆ ನಾನು ಮಾತಾಡುತ್ತೇನೆ. ಟಿಪ್ಪು ಜಯಂತಿ ಬಗ್ಗೆ ಅವರಿಗೆ ಅವರೇ ಉತ್ತರ ಕೊಟ್ಟಿದ್ದಾರೆ ಎಂದರು.